ಪಡುಬಿದ್ರಿ: ಪಡಿತರಕ್ಕೆ ಪಡೆಯಲು ಜನರ ಸಾಲು

Update: 2020-04-02 17:51 GMT

ಪಡುಬಿದ್ರಿ: ಎರಡು ತಿಂಗಳ ಮುಂಗಡ ಪಡಿತರ ವಿತರಣೆಗೆ ಬುಧವಾರದಿಂದ ಆರಂಭಗೊಂಡಿದ್ದು, ಗುರುವಾರ ಪಡಿತರ ವಿತರಣಾ ಕೇಂದ್ರಗಳಲ್ಲಿ ಪಡಿತರಕ್ಕಾಗಿ ಜನರು ಮುಗಿಬಿದ್ದ ಘಟನೆ ನಡೆಯಿತು. 

ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ತಪ್ಪು ಮಾಹಿತಿಯಿಂದ ಪಡುಬಿದ್ರಿಯ ಪಡಿತರ ವಿತರಣಾ ಕೇಂದ್ರಗಳಲ್ಲಿ ಮುಂಜಾವಿನಿಂದಲೇ ಪಡಿತರ ಪಡೆಯಲು ಗ್ರಾಹಕರು ಸರತಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 9ಗಂಟೆಗೆ ವೇಳೆ ನೂರಾರು ಸಂಖ್ಯೆಯಲ್ಲಿ ಪಡಿತರ ಸಾಮಾಗ್ರಿಗಳನ್ನು ಪಡೆಯಲು ಜನರು ಮುಗಿಬಿದ್ದರು. ಈ ಸಮಯದಲ್ಲಿ ಸಾಮಾಜಿಕ ಅಂತರ ಪಾಲಿಸದ ಗ್ರಾಹಕರಿಗೆ ಪಡಿತರ ಅಂಗಡಿಯ ಸಿಬ್ಬಂದಿಗಳು ಎಚ್ಚರಿಕೆ ನೀಡಿದರು.

ಬಿಸಿಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಶಾಮಿಯಾನ ವ್ಯವಸ್ಥೆಯನ್ನು ಪಡಿತರ ವಿತರಣಾ ಕೇಂದ್ರದ ಸಿಬ್ಬಂದಿಗಳು ಮಾಡಿದರು. ಅಲ್ಲದೆ ಸೇವೆಗೆ ವೇಗ ನೀಡಲು ಎರಡು ಕಡೆಗಳಲ್ಲಿ ಪಡಿತರ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಯಿತು.

ಟೋಕನ್ ವ್ಯವಸ್ಥೆ ಮಾಡಿ: ಯಾರೂ ಕೂಡಾ ಬೇಗ ಬಂದು ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ಈ ತಿಂಗಳ ಅಂತ್ಯದವರೆಗೂ ಪಡಿತರ ಎಲ್ಲರಿಗೂ ವಿತರಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಟೋಕನ್ ನೀಡುವ ಮೂಲಕ ಪಡಿತರ ವಿತರಿಸಲು ಸರಳವಾಗುತ್ತದೆ ಎಂದು ತಹಸೀಲ್ದಾರ್ ಮುಹಮ್ಮದ್ ಇಶ್ಹಾಕ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News