ಪ್ರಧಾನ ಮಂತ್ರಿ ಜನಧನ ಯೋಜನೆ: ಮಹಿಳಾ ಖಾತೆದಾರರಿಗೆ ಕೆಲ ಸೂಚನೆ

Update: 2020-04-03 12:07 GMT

ಉಡುಪಿ, ಎ.3: ಪ್ರಧಾನ ಮಂತ್ರಿ ಜನಧನ ಖಾತೆ ಹೊಂದಿರುವ ಮಹಿಳಾ ಖಾತೆದಾರರಿಗೆ, ಎಪ್ರಿಲ್‌ನಿಂದ ಪ್ರಾರಂಭಿಸಿ ಮೂರು ತಿಂಗಳ ಕಾಲ ಪ್ರತಿ ತಿಂಗಳೂ ರೂ.500 ಎಕ್ಸ್‌ಗ್ರೇಷಿಯಾ ಹಣವನ್ನು ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ ನೀಡಲಾಗುತ್ತದೆ.

ಎಪ್ರಿಲ್ ತಿಂಗಳ ಕಂತು ರೂ.500ನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ಈಗಾಗಲೇ ಬಿಡುಗಡೆ ಮಾಡಿದ್ದು, ಖಾತೆದಾರರು ಬ್ಯಾಂಕುಗಳಿಂದ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಸದ್ಯ ಕೋವಿಡ್-19ರ ಹಿನ್ನಲೆಯಲ್ಲಿ ಬ್ಯಾಂಕುಗಳ ಮುಂದೆ ಏಕಕಾಲಕ್ಕೆ ಜನಸಂದಣಿ ಸೇರುವುದನ್ನು ತಪ್ಪಿಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎ.3ರಿಂದ 9 ರವರೆಗೆ ಈ ಕೆಳಗಿನ ಸರದಿಯಂತೆ ಹಣ ಪಡೆದುಕೊಳ್ಳಬಹುದಾಗಿದೆ.

ಖಾತೆದಾರರ ಅಕೌಂಟ್ ನಂಬರ್‌ನ ಕೊನೆಯ ಸಂಖ್ಯೆ 0 ಅಥವಾ 1 ಇರುವವರು ಎ.3ರಂದು, 2 ಅಥವಾ 3 ಇರುವವರು ಎ.4ರಂದು , 4 ಅಥವಾ 5 ಇರುವವರು ಎ.7ರಂದು, 6 ಅಥವಾ 7 ಇರುವವರು ಎ.8ರಂದು, 8 ಅಥವಾ 9 ಇರುವವರು ಎ.9ರಂದು ಹಾಗೂ ಎ.9ರ ನಂತರ ಯಾವುದೇ ಖಾತೆದಾರರು ಯಾವುದೇ ದಿನದಂದು ಹಣ ಡ್ರಾ ಮಾಡಿಕೊಳ್ಳಲು ಅವಕಾಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News