ಉಡುಪಿ: ಕೊರೋನ ವೈರಸ್ ಜಾಗೃತಿಗೆ ಮರಳು ಶಿಲ್ಪ
Update: 2020-04-03 17:49 IST
ಉಡುಪಿ, ಎ.3: ಉಡುಪಿಯ ಸ್ಯಾಂಡ್‌ಹಾರ್ಟ್ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು ಮತ್ತವರ ತಂಡ ಕೊರೋನ ಮಹಾಮಾರಿಯ ಬಗ್ಗೆ ಜನರಲ್ಲಿ ಜಾಗ್ರತಿಯನ್ನು ಮೂಡಿಸಲು ಮರಳು ಶಿಲ್ಪ ರಚನೆಯನ್ನು ಮುಂದುವರಿಸಿದ್ದಾರೆ.
ಕೊರೋನ ವೈರಸ್ ಎನ್ನುವ ಮಹಾಮಾರಿಯು ನಮ್ಮ ಎಲ್ಲರ ಮನೆಯ ಸುತ್ತ ಆವರಿಸಿಕೊಂಡಿದ್ದು, ಅದರಿಂದ ಪಾರಾಗಬೇಕಾದರೆ ಮತ್ತು ಅದನ್ನು ನಾಶ ಮಾಡಬೇಕಾದರೆ ಮನೆಯ ಒಳಗೆ ಉಳಿದುಕೊಂಡು ಬಿಡಿ ಎನ್ನುವ ಸಂದೇಶವನ್ನು ಪ್ರಸ್ತುತ ಕಲಾಕೃತಿ ನೀಡುತ್ತಿದೆ.