ಕಾಸರಗೋಡು: ಶುಕ್ರವಾರ 7 ಮಂದಿಗೆ ಕೊರೋನ ಸೋಂಕು ದೃಢ

Update: 2020-04-03 13:02 GMT

ಕಾಸರಗೋಡು: ಕೇರಳದಲ್ಲಿ ಇಂದು 9 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಈ ಪೈಕಿ ಏಳು ಮಂದಿ ಕಾಸರಗೋಡಿನವರಾಗಿದ್ದಾರೆ.

ಇದರಿಂದ ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ 135ಕ್ಕೆ ಏರಿಕೆಯಾಗಿದೆ. 

ಈ ಪೈಕಿ ಮೂವರು ನಿಝಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಾಗಿದ್ದು, ಓರ್ವ ಗುಜರಾತ್ ನಿಂದ ಬಂದವರು. ಕೇರಳದಲ್ಲಿ ಒಟ್ಟು 295 ಮಂದಿಗೆ ಸೋಂಕು ತಗಲಿದೆ. ತ್ರಿಶೂರು ಮತ್ತು ಕಣ್ಣೂರು ಜಿಲ್ಲೆಯಲ್ಲಿ ಇಂದು ಒಂದು ಪ್ರಕರಣ ದೃಢಪಟ್ಟಿದೆ.

ಸೋಂಕು ಮುಕ್ತರಾಗಿ ಇಂದು ಜಿಲ್ಲೆಯಲ್ಲಿ ಮೂವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News