ಅಂಚೆ ಕಚೇರಿಗಳಲ್ಲಿ ಪಿಂಚಣಿ ಪಡೆಯಲು ಅವಕಾಶ

Update: 2020-04-03 13:04 GMT

ಮಂಗಳೂರು, ಎ.3: ಕೊರೋನ ವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್‌ಡೌನ್ ಅವಧಿಯಲ್ಲಿ ಅಂಚೆ ಇಲಾಖೆ ಅಗತ್ಯ ಸೇವೆಗಳನ್ನು ನೀಡುತ್ತಿದೆ. ಮಂಗಳೂರು ವಿಭಾಗದಲ್ಲಿರುವ ಎಲ್ಲಾ ಇಲಾಖಾ ಅಂಚೆ ಕಚೇರಿ ಹಾಗೂ ಹೆಚ್ಚತಿನ ಶಾಖಾ ಅಂಚೆ ಕಚೇರಿಗಳು ಕಾರ್ಯಾರಂಭಿಸಿವೆ.

ಇದೀಗ ಮಾರ್ಚ್ 2020ರ ವಿವಿಧ ಸಾಮಾಜಿಕ ಪಿಂಚಣಿ ಯೋಜನೆಗಳಲ್ಲಿ 25,777 ಜನರಿಗೆ ಪಾವತಿಯಾಗಬೇಕಾಗಿರುವ ಒಟ್ಟು 2,18,45,000 ರೂ. ಆಯಾ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಫಲಾನುಭವಿಗಳು ಸಂಬಂಧಿಸಿದ ಅಂಚೆ ಕಚೇರಿಗೆ ತಮ್ಮ ಎಸ್.ಬಿ. ಪಾಸ್ ಪುಸ್ತಕವನ್ನು ತೆಗೆದುಕೊಂಡು ಬಂದು ಪಡೆಯಬಹುದು. ಅಲ್ಲದೇ ಸುಮಾರು 28000 ಫಲಾನುಭವಿಗಳಿಗೆ ಒಟ್ಟು 1,96,00,000 ಮನಿಯಾರ್ಡರ್‌ಗಳ ಮೂಕ ಪಾವತಿಸಲು ಇಂದು ಬೆಂಗಳೂರಿನಿಂದ ಹಣವು ಕಳುಹಿಸಲಾಗಿದ್ದು, ಮೂರು ದಿನಗಳೊಳಗೆ ಅಂಚೆ ಕಚೇರಿ ತಲುಪಲಿದೆ.

ಪಾವತಿ ಸಂದರ್ಭ ಸಾರ್ವಜನಿಕರು ಅಂಚೆ ಕಚೇರಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಹಾಗೂ ಕೊರೋನ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಎಲ್ಲಾ ಅಂಚೆ ಕಚೇರಿಗಳಲ್ಲಿ ಸದ್ಯ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಅಗತ್ಯ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ಮತ್ತು ವಿವಿಧ ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಇಲಾಖೆ ಕಾಳಜಿ ವಹಿಸುತ್ತಿದೆ. ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಬಲ್ಮಠ ವಿಭಾಗೀಯ ಕಚೇರಿಯ ವಾಟ್ಸಾಪ್ ಸಂಖ್ಯೆ 9448291072ಗೆ ಸಂದೇಶ ಕಳುಹಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News