×
Ad

ಕೊರೋನ ವೈರಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ಅವಹೇಳನಗೈದ ಆರೋಪ: ದೂರು

Update: 2020-04-03 20:22 IST

ಮಂಗಳೂರು, ಎ.3: ಕೊರೋನ ವೈರಸ್ ಕುರಿತಂತೆ ಮುಸ್ಲಿಂ ಸಮುದಾಯವನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ ಆರೋಪದ ಮೇಲೆ ಪಂಜಿಮೊಗರು ಸಮೀಪದ ಉರುಂದಾಡಿಯ ರಾಜೇಶ್ ಶೆಟ್ಟಿ ಯಾನೆ ಬಾಬು ಎಂಬಾತನ ವಿರುದ್ಧ ಪಿಎಫ್‌ಐ ಕಾವೂರು ವಲಯ ಕಾರ್ಯಕರ್ತ ಶಬೀರ್ ಉರುಂದಾಡಿ ಎಂಬವರು ಕಾವೂರು ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಯು ತನ್ನ ಫೇಸ್‌ಬುಕ್ ಖಾತೆಯಲ್ಲಿ ಎ.2ರಂದು ಸಂಜೆ 4 ಗಂಟೆಗೆ ಬ್ಯಾರಿ ಮುಸ್ಲಿಂ ಸಮುದಾಯವನ್ನು ನಿಂದಿಸಿದ ಪೋಸ್ಟ್ ಹಾಕಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾನೆ. ಹಾಗಾಗಿ ಈತನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಶಬೀರ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News