ಮೋದಿ ಸಂದೇಶದಲ್ಲಿ ‘9’ ಸಂಖ್ಯೆಯ ಸಿದ್ಧಾಂತಕ್ಕೆ ತರೂರ್ ಟೀಕೆ

Update: 2020-04-03 16:41 GMT

ಹೊಸದಿಲ್ಲಿ, ಎ.3: ಪ್ರಧಾನಿ ಮೋದಿ ಸಂದೇಶದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಹಿಂದೂ ಧರ್ಮದಲ್ಲಿ 9 ಸಂಖ್ಯೆಗಿರುವ ಶುಭ ಅಂಶಗಳ ಬಗ್ಗೆ ಚರ್ಚೆಗಳು ಆರಂಭವಾಗಿರುವಂತೆಯೇ ಈ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

“ಎಪ್ರಿಲ್ 5ರಂದು ರಾತ್ರಿ 9 ಗಂಟೆಗೆ, 9 ನಿಮಿಷ ದೀಪ ಉರಿಸಿ ಎಂದು ಪ್ರಧಾನಿ ಹೇಳಿದ್ದಾರೆ. ಎಪ್ರಿಲ್ ಎಂದರೆ ನಾಲ್ಕನೇ ತಿಂಗಳು. ನಾಲ್ಕನೇ ತಿಂಗಳಿನ ಐದನೇ ದಿನವನ್ನು ಕೂಡಿಸಿದರೆ 9 ಆಗುತ್ತದೆ. ರಾಮನವಮಿಯಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ. ಇದು ಆಕಸ್ಮಿಕ ಘಟನೆಯಲ್ಲ. ಬಹುಷಃ ಅವರು ನಂಬರ್ 9 ಮತ್ತು ಹಿಂದು ಧರ್ಮದ ನಡುವೆ ಇರುವ ಶುಭ ಸಂಗತಿಗಳನ್ನು ಆಚರಣೆಗೆ ತರುತ್ತಿದ್ದಾರೆ. ಮತ್ತೆ ರಾಮನ ಬಳಿಗೆ ?( ಬ್ಯಾಕ್ ಟು ರಾಮ್ ಭರೋಸೆ ?)” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಪ್ರಧಾನಿಯವರ ಸಂದೇಶದ ಬಗ್ಗೆ ಟೀಕಿಸಿರುವ ತರೂರ್, “ಪ್ರಧಾನ ಶೋಮ್ಯಾನ್‌ರ ಸಂದೇಶವನ್ನು ಆಲಿಸಿದೆ. ಜನತೆ ಎದುರಿಸುತ್ತಿರುವ ನೋವು, ಸಂಕಷ್ಟ, ತೊಂದರೆ, ಆರ್ಥಿಕ ಸಮಸ್ಯೆಗಳಿಗೆ ಸಮಾಧಾನ ನೀಡುವ ಯಾವ ಅಂಶವೂ ಇದರಲ್ಲಿಲ್ಲ. ಲಾಕ್‌ಡೌನ್ ಬಳಿಕದ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತ ಯಾವುದೇ ದೂರದೃಷ್ಟಿಯಿಲ್ಲ. ಇದು ಭಾರತದ ಫೊಟೊ-ಅಪ್(ಸುಯೋಗದ) ಪ್ರಧಾನಿ ಪ್ರದರ್ಶಿಸಿದ ಒಂದು ಒಳ್ಳೆಯ ಕ್ಷಣವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ರಾಮನವಮಿ ಎಂದರೆ ರಾಮ ಹುಟ್ಟಿದ 9ನೇ ದಿನ. ಅದು ಗುರುವಾರಕ್ಕೆ ಮುಗಿದಿದೆ. ಇವತ್ತು ಶುಕ್ರವಾರ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News