ಅಮೆರಿಕ: ಒಂದೇ ದಿನದಲ್ಲಿ 1,169 ಸಾವು

Update: 2020-04-03 17:58 GMT

ವಾಶಿಂಗ್ಟನ್, ಎ. 3: ಅಮೆರಿಕದಲ್ಲಿ ಕೊರೋನವೈರಸ್‌ನಿಂದಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,169 ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಅಂಕಿ-ಸಂಖ್ಯೆಗಳು ಗುರುವಾರ ತಿಳಿಸಿವೆ. ಇದು ಚೀನಾದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಕೋವಿಡ್-19 ಕಾಯಿಲೆ ಸ್ಫೋಟಗೊಂಡಂದಿನಿಂದ ಯಾವುದೇ ದೇಶದಲ್ಲಿ ಒಂದು ದಿನದ ಅವಧಿಯಲ್ಲಿ ಸಂಭವಿಸಿದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ.

ಈವರೆಗೆ ಈ ದಾಖಲೆಯನ್ನು ಇಟಲಿ ಹೊಂದಿತ್ತು. ಅಲ್ಲಿ ಮಾರ್ಚ್ 27ರಂದು 969 ಮಂದಿ ಮೃತಪಟ್ಟಿದ್ದರು. ಅಮೆರಿಕದಲ್ಲಿ ಈವರೆಗೆ ಕೊರೋನವೈರಸ್‌ನಿಂದಾಗಿ ಸತ್ತವರ ಸಂಖ್ಯೆ 5,926 ಆಗಿದೆ.

ಜಾಗತಿಕ ಮಟ್ಟದಲ್ಲಿ ಈಗಲೂ ಇಟಲಿ ಮೊದಲ ಸ್ಥಾನದಲ್ಲಿದೆ. ಅಲ್ಲಿ 13,915 ಮಂದಿ ಈವರೆಗೆ ಮೃತಪಟ್ಟಿದ್ದಾರೆ. ನಂತರದ ಸ್ಥಾನವನ್ನು ಸ್ಪೇನ್ ಹೊಂದಿದೆ. ಅಲ್ಲಿ 10,003 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

 ಇದೇ 24 ಗಂಟೆಗಳ ಅವಧಿಯಲ್ಲಿ ಅಮೆರಿಕದಲ್ಲಿ ಹೊಸದಾಗಿ 30,000ಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಆ ದೇಶದಲ್ಲಿ ಈವರೆಗೆ ದಾಖಲಾದ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 2,43,000ವನ್ನು ಮೀರಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ಹೇಳಿದೆ.

ಸೋಂಕಿನ ಕೇಂದ್ರಬಿಂದು ನ್ಯೂಯಾರ್ಕ್

ನ್ಯೂಯಾರ್ಕ್ ನಗರ ಅಮೆರಿಕದ ಕೊರೋನವೈರಸ್ ಸ್ಫೋಟದ ಕೇಂದ್ರಬಿಂದು ಆಗಿದೆ. ಅಲ್ಲಿ 1,500ಕ್ಕೂ ಅಧಿಕ ಸಾವುಗಳು ಸಂಭವಿಸಿವೆ ಹಾಗೂ ಸುಮಾರು 50,000 ಸೋಂಕು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News