ಫ್ರಾನ್ಸ್: ಒಂದು ದಿನದಲ್ಲಿ 471 ಸಾವು

Update: 2020-04-03 18:02 GMT

ಫ್ರಾನ್ಸ್, ಎ. 3: ಕಳೆದ 24 ಗಂಟೆಗಳ ಅವಧಿಯಲ್ಲಿ ನೂತನ-ಕೊರೋನವೈರಸ್‌ನಿಂದಾಗಿ 471 ಸಾವುಗಳು ಸಂಭವಿಸಿವೆ ಎಂದು ಫ್ರಾನ್ಸ್ ಗುರುವಾರ ವರದಿ ಮಾಡಿದೆ. ಇದರೊಂದಿಗೆ ಆ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಸಂಭವಿಸಿದ ಸಾವುಗಳ ಒಟ್ಟು ಸಂಖ್ಯೆ 4,503ಕ್ಕೆ ಏರಿದೆ.

ಫ್ರಾನ್ಸ್ ನೀಡಿರುವ ಸಾವಿನ ಸಂಖ್ಯೆಯು ಆಸ್ಪತ್ರೆಗಳಲ್ಲಿ ಮೃತಪಟ್ಟವರದ್ದಾಗಿದೆ. ಮನೆಗಳಲ್ಲಿ ಅಥವಾ ವೃದ್ಧಾಶ್ರಮಗಳಲ್ಲಿ ಸತ್ತವರ ಸಂಖ್ಯೆ ಇದರಲ್ಲಿ ಸೇರಿಲ್ಲ. ಫ್ರಾನ್ಸ್‌ನಲ್ಲಿ ಸಾಂಕ್ರಾಮಿಕ ಸ್ಫೋಟಿಸಿದ ಬಳಿಕ ಆ ದೇಶದಲ್ಲಿರುವ ವೃದ್ಧಾಶ್ರಮಗಳಲ್ಲಿ 884 ಮಂದಿ ಮೃತಪಟ್ಟಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ ಎಂದು ದೇಶದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News