2 ಕೊರೋನ ಪ್ರಕರಣ ದೃಢಪಟ್ಟ ನಂತರ ತಬ್ಲೀಗಿ ಕಾರ್ಯಕ್ರಮದ ಅನುಮತಿ ರದ್ದುಗೊಳಿಸಿದ್ದ ಮಹಾರಾಷ್ಟ್ರ ಸರಕಾರ

Update: 2020-04-04 13:11 GMT

ಮುಂಬೈ: ದಿಲ್ಲಿಯ ನಿಝಾಮುದ್ದೀನ್ ಪ್ರದೇಶದಲ್ಲಿನ ತಬ್ಲೀಗಿ ಜಮಾಅತ್‍ ನ ಮರ್ಕಝ್ ಕಾರ್ಯಕ್ರಮ ಆಯೋಜಿಸಿದ್ದ ಸಮಯದಲ್ಲಿಯೇ ಮುಂಬೈಯಿಂದ ಸುಮಾರು 50 ಕಿ.ಮೀ. ದೂರದಲ್ಲಿ ಇಂತಹದೇ ಕಾರ್ಯಕ್ರಮ ನಡೆಯಲಿತ್ತು. ಆದರೆ  ಮಹಾರಾಷ್ಟ್ರದಲ್ಲಿ ಎರಡು ಕೊರೋನ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಈ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ಅಲ್ಲಿನ ರಾಜ್ಯ ಸರಕಾರ ರದ್ದುಗೊಳಿಸಿ ಕೊರೋನ ವೈರಸ್ ಪ್ರಕರಣಗಳ ಏರಿಕೆಯನ್ನು ತಡೆಗಟ್ಟಿತ್ತೆಂಬ ಅಂಶ ಬೆಳಕಿಗೆ ಬಂದಿದೆ.

ವಸಾಯ್ ಕಾರ್ಯಕ್ರಮವನ್ನು ಸರಕಾರ ರದ್ದುಗೊಳಿಸಿದಾಗ ಕಾರ್ಯಕ್ರಮದ ಸಂಘಟಕರೂ ಅದಕ್ಕೆ ಸಹಕರಿಸಿ ಒಪ್ಪಿದ್ದರು ಎಂದು ತಿಳಿದು ಬಂದಿದೆ. ವಸಾಯ್‍ ನ ಸನ್ ಸಿಟಿಯಲ್ಲಿ ಮಾರ್ಚ್ 12-13ರಂದು ಸುಮಾರು 50,000 ಜನರ ಭಾಗವಹಿಸುವಿಕೆಯ ನಿರೀಕ್ಷೆಯೊಂದಿಗೆ ತಬ್ಲೀಗಿ ಜಮಾತ್ ಕಾರ್ಯಕ್ರಮ ಆಯೋಜನೆಗೆ ಮುಂದಾಗಿತ್ತು. ಇದಕ್ಕಾಗಿ ಆಯೋಜಕರು ಅದಾಗಲೇ ಅನುಮತಿಯನ್ನು ಪಡೆದಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಎರಡು ಕೋವಿಡ್-19 ಪ್ರಕರಣಗಳು ದೃಢಪಟ್ಟ ನಾಲ್ಕು ದಿನಗಳ ನಂತರ, ಅಂದರೆ ಮಾರ್ಚ್ 6ರಂದು ರಾಜ್ಯ ಸರಕಾರ ಮಹತ್ತರ ನಿರ್ಧಾರ ಕೈಗೊಂಡು ಕಾರ್ಯಕ್ರಮವನ್ನು ರದ್ದುಗೊಳಿಸಿದ ಕ್ರಮಕ್ಕೆ ಸಂಘಟಕರೂ ಒಪ್ಪಿಗೆ ಸೂಚಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 22ರಂದು ತಬ್ಲೀಗಿ ಜಮಾಅತ್ ಕಾರ್ಯಕ್ರಮಕ್ಕೆ ಅನುಮತಿ ಕೋರಿದ್ದರೆ ಫೆಬ್ರವರಿ 6ರಂದು ಅನುಮತಿ ನೀಡಲಾಗಿತ್ತು, ಆದರೆ ನಂತರ ಕೊರೋನ ಪ್ರಕರಣಗಳ ಹಿನ್ನೆಲೆಯಲ್ಲಿ ಅನುಮತಿ ರದ್ದುಗೊಳಿಸಲಾಯಿತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News