ಮೈನ್ ಸ್ವಿಚ್ ಆಫ್ ಮಾಡಬೇಡಿ: ಮೆಸ್ಕಾಂ ಇಂಜಿನಿಯರ್ ಮನವಿ

Update: 2020-04-05 10:15 GMT

ಪುತ್ತೂರು : ಕೊರೋನ ವೈರಸ್‍ ಭೀತಿಯಿಂದ ಹೊರಬರುವ ನಿಟ್ಟಿನಲ್ಲಿ ಎ.5ರಂದು ರಾತ್ರಿ ವಿದ್ಯುತ್ ದೀಪಗಳನ್ನು ಆರಿಸಿ ಹಣತೆ, ದೀಪ, ಕ್ಯಾಂಡಲ್ ಬೆಳಗಿಸುವಂತೆ ಪ್ರಧಾನಿ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಮೈನ್ ಸ್ವಿಚ್ ಆಫ್ ಮಾಡದೇ ಕೇವಲ ಲೈಟ್‍ಗಳನ್ನು ಆಫ್ ಮಾಡಿ ಸಹಕರಿಸುವಂತೆ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಎಲ್ಲಾ ಕಡೆಗಳಲ್ಲಿ ಏಕ ಕಾಲದಲ್ಲಿ ಮೈನ್ ಸ್ವಿಚ್ ಆಫ್ ಮಾಡುವುದರಿಂದ ಲೈನ್‍ಗೆ ಅಧಿಕ ಹೊರೆ ಬೀಳುತ್ತಿದ್ದು ಇದರಿಂದ ಸಮಸ್ಯೆ ಉಂಟಾಗಬಹುದು. ಇದಕ್ಕಾಗಿ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಲೈಟ್ ಮಾತ್ರ ಆಫ್ ಮಾಡಬೇಕು. ಉಳಿದಂತೆ ಮನೆಯಲ್ಲಿರುವ ಫ್ಯಾನ್, ರೆಫ್ರಿಜರೇಟರ್ ಸೇರಿದಂತೆ ಎಲ್ಲಾ ವಿದ್ಯುತ್ ಉಪಕರಣಗಳು ಚಾಲನೆಯಲ್ಲಿರಲಿ. ಈ ಸಂದರ್ಭ ಪ್ರತಿಯೊಬ್ಬರು ಮೈನ್ ಸ್ವಿಚ್ ಆಫ್ ಮಾಡದೇ ಸಹಕರಿಸುವಂತೆ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಎಂದಿನಂತೆ ಉರಿಯುತ್ತಿರಲಿ. ಬೀದಿ ದೀಪಗಳನ್ನು ಆಫ್ ಮಾಡದೇ ಸಹಕರಿಸುವಂತೆ ನಗರ ಸಭೆ ಹಾಗೂ ಗ್ರಾಮ ಪಂಚಾಯತ್‍ಗಳಿಗೆ ಸೂಚನೆ ನೀಡಲಾಗಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News