×
Ad

ನ್ಯಾಯಾಧೀಶರಿಂದ ಅಶಕ್ತ ಕುಟುಂಬಗಳಿಗೆ ನೆರವು

Update: 2020-04-05 17:57 IST

ಮಂಗಳೂರು, ಎ. 5: ಮೂಡುಬಿದಿರೆ ನ್ಯಾಯಾಲಯದ ನ್ಯಾಯಾಧೀಶರು ಮತ್ತು ನ್ಯಾಯಾಂಗ ನೌಕರರ ವತಿಯಿಂದ ಸುಮಾರು 50 ಅಶಕ್ತ ಕುಟುಂಬಗಳಿಗೆ ಅಕ್ಕಿ ಮತ್ತು ದಿನಬಳಕೆಯ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು.

ಜೆಎಂಎಫ್‌ಸಿ ನ್ಯಾಯಾಧೀಶರು ಮತ್ತು ನ್ಯಾಯಾಂಗ ನೌಕರರು ಸೇವಾಕಾರ್ಯದಲ್ಲಿ ಪಾಲ್ಗೊಂಡಿದ್ದರು. ಇಲ್ಲಿನ ಅಲಂಗಾರು, ಒಂಟಿಕಟ್ಟೆ, ಮಾಸ್ತಿಕಟ್ಟೆ ಹಾಗು ಬೋರುಗುಡ್ಡೆ ಪ್ರದೇಶದ ಅಶಕ್ತ ಕುಟುಂಬಗಳನ್ನು ಗುರುತಿಸಿ ನ್ಯಾಯಾಧೀಶರು ಮನೆಗಳಿಗೆ ತೆರಳಿ ದಿನಬಳಕೆಯ ಸಾಮಗ್ರಿಗಳನ್ನು ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News