×
Ad

​ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಲು ಎನ್‌ಎಸ್‌ಯುಐ ಒತ್ತಾಯ

Update: 2020-04-05 19:11 IST

ಮಂಗಳೂರು, ಎ.5: ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವ ಮಧ್ಯೆ ಕೊರೋನ ವೈರಸ್ ತಡೆಗಟ್ಟಲು ಲಾಕ್‌ಡೌನ್ ಘೋಷಣೆಯ ಬಳಿಕವಂತೂ ಆರ್ಥಿಕತೆ ಮತ್ತಷ್ಟು ಸ್ತಬ್ದಗೊಂಡಿದೆ. ಇದರಿಂದ ರಾಜ್ಯದ ಅಲ್ಪಸಂಖ್ಯಾತ, ಹಿದುಳಿದ ವರ್ಗ ಹಾಗು ಪರಿಶಿಷ್ಟ ಜಾತಿ-ಪಂಗಡ ಸಹಿತ ಎಲ್ಲಾ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗು ವಿದ್ಯಾರ್ಥಿ ಸಾಲದ ಮೊತ್ತಗಳನ್ನು ಹಿಂದಿನ ಬಾಕಿ ಹಾಗು ಈ ಬಾರಿಯ ಶೈಕ್ಷಣಿಕ ವರ್ಷದ್ದು ಸೇರಿಸಿ ತಕ್ಷಣ ಬಿಡುಗಡೆಗೊಳಿಸಬೇಕು ಎಂದು ದ.ಕ.ಜಿಲ್ಲಾ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಒತ್ತಾಯಿಸಿದ್ದಾರೆ.

ಕಳೆದ ಹಾಗು ಅದಕ್ಕಿಂತ ಮುಂಚಿನ ಶೈಕ್ಷಣಿಕ ವರ್ಷದ ಪ್ರಿ ಮೆಟ್ರಿಕ್, ಪೋಸ್ಟ್ ಮೆಟ್ರಿಕ್, ಮೆರಿಟ್ ಕಂ ಮಿನ್ಸ್ ವಿದ್ಯಾರ್ಥಿ ವೇತನಗಳು ಹಾಗು ಅರಿವು ಮೊದಲಾದ ಶೈಕ್ಷಣಿಕ ಸಾಲದ ಮೊತ್ತಗಳು ವಿದ್ಯಾರ್ಥಿಗಳಿಗೆ ಮಂಜೂರಾಗಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮಸುಕಾಗಿವೆ. ಹಾಗಾಗಿ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News