ಹೆಚ್ಚಿನ ದರ ವಸೂಲಿ: ಮೆಡಿಕಲ್ ವಿರುದ್ಧ ಮೊಕದ್ದಮೆ

Update: 2020-04-05 14:43 GMT

ಕುಂದಾಪುರ, ಎ.5: ಹೆಚ್ಚಿನ ದರಕ್ಕೆ ಮಾಸ್ಕ್ ಮಾರಾಟ ಮಾಡುತ್ತಿದ್ದ ಕುಂದಾ ಪುರ ನಗದ ಔಷಧಿ ಅಂಗಡಿಯೊಂದರ ವಿರುದ್ಧ ಉಡುಪಿ ಜಿಲ್ಲಾ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳ ತಂಡ, ಮೊಕದ್ದಮೆ ದಾಖಲಿಸಿ ದಂಡ ವಸೂಲಿ ಮಾಡಿದೆ.

ಕೇಂದ್ರ ಸರಕಾರ ನಿಗದಿ ಪಡಿಸಿದ 16 ರೂ. ಮೊತ್ತದ ತ್ರೀ ಫ್ಲೈ ಮಾಸ್ಕ್‌ನ್ನು ಗ್ರಾಹಕರಿಗೆ 20ರೂ.ಗೆ ಮಾರಾಟ ಮಾಡುತ್ತಿದ್ದ ಔಷಧಿ ಅಂಗಡಿಗೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ, ನಿರೀಕ್ಷಕ ರಾಗ್ಯಾ ನಾಯಕ್, ಬಿ.ಎಸ್.ಮಂಜಪ್ಪ, ಸ್ಮಿತಾ ಹಾಗೂ ಸಿಬ್ಬಂದಿ ಸಂತೋಷ್ ತಂಡ ಎ.5ರಂದು ದಾಳಿ ನಡೆಸಿದೆ. ಈ ತಂಡ ಅಂಗಡಿ ವಿರುದ್ಧ ಮೊಕದ್ದಮೆ ದಾಖಲಿಸಿ, 5000 ರೂ. ದಂಡವನ್ನು ವಸೂಲಿ ಮಾಡಿದೆ.

ಕುಂದಾಪುರ ತರಕಾರಿ, ದಿನಸಿ ಮತ್ತು ಮಾಂಸದ ಅಂಗಡಿಗಳ ತಪಾಸಣೆ ನಡೆಸುವ ಸಂದರ್ಭದಲ್ಲಿ ಅನೇಕ ತರಕಾರಿ ಅಂಗಡಿಗಳಲ್ಲಿ ತರಕಾರಿಗಳ ದರಪಟ್ಟಿ ಯನ್ನು ಪ್ರದರ್ಶಿಸದಿರುವುದು ಕಂಡುಬಂತು. ಜಿಲ್ಲಾಧಿಕಾರಿ ನಿರ್ದೇಶನದಂತೆ ಎಲ್ಲ ತರಕಾರಿ ಅಂಗಡಿಗಳು ದರಪಟ್ಟಿ ಪ್ರದರ್ಶಿಸಲು ಸೂಚಿಸಲಾಯಿತು. ಆರೋಗ್ಯ ತುರ್ತು ಸಂದರ್ಭದಲ್ಲಿ ಮಾರ್ಸ್ಕ್ ಹಾಗೂ ಸ್ಯಾನಿಟೈಸರುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು ವುದು ಎಂದು ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News