ಕೊರೋನ ವೈರಸ್ ಗಾಳಿಯಿಂದ ಹರಡುತ್ತದೆ ಎನ್ನಲು ಯಾವುದೇ ಆಧಾರಗಳಿಲ್ಲ

Update: 2020-04-05 16:23 GMT

ಹೊಸದಿಲ್ಲಿ, ಎ.5: ಕೊರೋನ ವೈರಸ್ ಸೋಂಕು ಗಾಳಿಯಿಂದ ಹರಡುತ್ತದೆ ಎನ್ನುವುದಕ್ಕೆ ಸದ್ಯಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ರವಿವಾರ ಸ್ಪಷ್ಟಪಡಿಸಿದೆ.

‘ವಿಜ್ಞಾನದಲ್ಲಿ ಯಾರೇ ಪ್ರಯೋಗಗಳನ್ನು ಮಾಡಿರಲಿ,ವಿಭಿನ್ನ ಅಭಿಪ್ರಾಯಗಳಿರುತ್ತವೆ, ಆದರೆ ಸಮತೋಲಿತ,ಸಾಕ್ಷಾಧಾರ ಗಳ ಆಧಾರಿತ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಹೇಳಿದ ಐಸಿಎಂಆರ್‌ನ ಹಿರಿಯ ಅಧಿಕಾರಿಯೋರ್ವರು,ಉದಾಹರಣೆಗೆ ಕೊರೋನ ವೈರಸ್ ಸೋಂಕು ಗಾಳಿಯಿಂದ ಹರಡುತ್ತಿದ್ದರೆ ಸೋಂಕಿತ ವ್ಯಕ್ತಿಯ ಕುಟುಂಬದಲ್ಲಿಯ ಎಲ್ಲರೂ ಸೋಂಕಿಗೆ ಗುರಿಯಾಗಿರುತ್ತಿದ್ದರು. ಏಕೆಂದರೆ ಅವರೆಲ್ಲ ರೋಗಿಯು ವಾಸವಿರುವ ಅದೇ ಪರಿಸರದಲ್ಲಿಯೇ ವಾಸವಿದ್ದುಕೊಂಡು ಅದೇ ಗಾಳಿಯನ್ನು ಉಸಿರಾಡಿಸುತ್ತಿರುತ್ತಾರೆ. ಕೊರೋನ ವೈರಸ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಸೋಂಕು ಗಾಳಿಯಲ್ಲಿ ಹರಡುತ್ತಿದ್ದರೆ ಇತರ ರೋಗಿಗಳೂ ಸೋಂಕಿಗೆ ಗುರಿಯಾಗುತ್ತಿದ್ದರು. ಆದರೆ ಇಲ್ಲಿ ಅಂತಹುದು ಸಂಭವಿಸುತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News