×
Ad

ಮಂಗಳೂರು: ದೀಪ ಬೆಳಗಿಸಿದ ಜನತೆ

Update: 2020-04-05 21:58 IST

ಮಂಗಳೂರು, ಎ.5: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಕೊರೋನ ವೈರಸ್ ವಿರುದ್ಧ ರವಿವಾರ ರಾತ್ರಿ 9 ಗಂಟೆಗೆ ನಗರದ ಬಹುತೇಕ ಜನತೆ ದೀಪ ಹಚ್ಚಿದ್ದಾರೆ.

ನಗರ ಸಹಿತ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಕೂಡ ಜನರು ಹಣತೆ, ಕ್ಯಾಂಡಲ್, ಟಾರ್ಚ್, ಮೊಬೈಲ್ ಲೈಟ್‌ಗಳನ್ನು ಬೆಳಗಿಸಿ ಕರೋನ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ರಾತ್ರಿ 9 ಗಂಟೆಗೆ ಸರಿಯಾಗಿ ಮನೆ, ಫ್ಲಾಟ್‌ಗಳಲ್ಲಿ ಲೈಟ್ ಆಫ್ ಮಾಡಿದ ಜನರು ಮನೆ ಮುಂದೆ, ಬಾಲ್ಕನಿ, ತಾರಸಿ ಮೇಲೆ ನಿಂತು 9 ನಿಮಿಷಗಳ ಕಾಲ ದೀಪ ಬೆಳಗಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳೂ ಪ್ರಧಾನಿ ಕರೆಗೆ ಸ್ಪಂದಿಸಿದ್ದಾರೆ. ಶಾಸಕರು, ಸಂಸದರೂ ತಮ್ಮ ಮನೆಗಳಲ್ಲಿ ದೀಪ ಬೆಳಗಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News