ಕ್ವಾರಂಟೈನ್ ಪೂರ್ಣಗೊಳಿಸಿದವರಿಗೆ ಮತ್ತೆ ನಿಗಾ: ಡಿಎಚ್‌ಓ
Update: 2020-04-05 22:12 IST
ಉಡುಪಿ, ಎ.5: ಜಿಲ್ಲೆಯಲ್ಲಿ ಈಗಾಗಲೇ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದವರನ್ನು ಮತ್ತೆ 14 ದಿನಗಳ ಕಾಲ ನಿಗಾದಲ್ಲಿ ಇಡಲಾಗು ವುದು ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ಪ್ರಸ್ತುತ ಕೊರೋನ ಸೋಂಕಿತರಾಗಿರುವ ಮೂವರು ವ್ಯಕ್ತಿಗಳ ಆರೋಗ್ಯ ಉತ್ತಮವಾಗಿದ್ದು, ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ. ಜಿಲ್ಲೆಯಲ್ಲಿ ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿರುವವರು ಹೊರಗಡೆ ಓಡಾಡು ವುದು ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ 9663957222, 96639 50222ಗೆ ಮಾಹಿತಿ ನೀಡಬೇಕು. ಸಹಾಯವಾಣಿಯ ಸಹಾಯ ಕೋರಿ ಈವರೆಗೆ 1136 ಕರೆಗಳು ಬಂದಿವೆ. ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ರಾಜ್ಯ ಗಳಿಂದ ಬಂದವರ ಮೇಲೂ ಸಹ ಆರೋಗ್ಯ ಇಲಾಖೆ ನಿಗಾವಹಿಸಿದೆ ಎಂದು ತಿಳಿಸಿದರು.