ಬ್ರಿಟನ್: ನಿಲ್ಲದ ಕೊರೋನ ಅಟ್ಟಹಾಸ; ಒಂದೇ ದಿನದಲ್ಲಿ 798 ಬಲಿ

Update: 2020-04-05 17:33 GMT

ಲಂಡನ್, ಎ.5: ಬ್ರಿಟನ್‌ನಲ್ಲಿ ಕೊರೋನ ವೈರಸ್‌ನ ಅಟ್ಟಹಾಸಕ್ಕೆ ಶನಿವಾರ ಒಂದೇ ದಿನದಲಿ 708 ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ 5 ವರ್ಷದ ಬಾಲಕನೂ ಇದ್ದು, ಆ ದೇಶದಲ್ಲಿ ಈ ಭೀಕರ ಸೋಂಕಿಗೆ ಬಲಿಯಾದ ಅತ್ಯಂತ ಕಿರಿಯ ವಯಸ್ಸಿನವನಾಗಿದ್ದಾನೆ.

 ಬ್ರಿಟನ್‌ನಲ್ಲಿ ಶನಿವಾರ ಕೊರೋನ ಸೋಂಕಿನ 4313 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಆ ದೇಶದಲ್ಲಿ ಕೊರೋನಪೀಡಿತರ ಒಟ್ಟು ಸಂಖ್ಯೆ 41903ಕ್ಕೇರಿದೆ.

 ಬ್ರಿಟನ್‌ನಲ್ಲಿ ಕಳೆದ ವಾರ ಸತತವಾಗಿ ಸರಾಸರಿ ಪ್ರತಿ ದಿನ 500 ಮಂದಿ ಸಾವನ್ನಪ್ಪುತ್ತಿದ್ದು, ಮುಂದಿನ 10 ದಿನಗಳೊಳಗೆ ಈ ಸಂಖ್ಯೆ ಉತ್ತುಂಗಾವಸ್ಥೆಯನ್ನು ತಲುಪಲಿದೆ ಎಂದು ಬ್ರಿಟಿಶ್ ಆರೋಗ್ಯ ಇಲಾಖೆಯು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News