ಫ್ರಾನ್ಸ್: 7560ಕ್ಕೇರಿದ ಸಾವಿನ ಸಂಖ್ಯೆ

Update: 2020-04-05 17:52 GMT

ಪ್ಯಾರಿಸ್, ಎ.5: ಯುರೋಪ್‌ನಾದ್ಯಂತ ಕೊರೋನ ವೈರಸ್ ಮರಣ ಮೃದಂಗ ಬಾರಿಸುತ್ತಿದ್ದು, ಫ್ರಾನ್ಸ್‌ನಲ್ಲಿ ಕಳೆದ 24 ತಾಸುಗಳಲ್ಲಿ 441 ಮಂದಿ ಸೋಂಕಿನಂದ ಸಾವಿಗೀಡಾಗಿದ್ದಾರೆ. ಆದಾಗ್ಯೂ ಶುಕ್ರವಾರ 588 ಮಂದಿ ಸಾವನ್ನಪ್ಪಿದ್ದು, ಅದಕ್ಕೆ ಹೋಲಿಸಿದರೆ ಇಂದು ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಇದರೊಂದಿಗೆ ಫ್ರಾನ್ಸ್‌ನಲ್ಲಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾದವರ ಸಂಖ್ಯೆ 7560ಕ್ಕೇರಿದೆಯೆಂದು ಹಿರಿಯ ಆರೋಗ್ಯ ಅಧಿಕಾರಿ ಸೊಲೋಮನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಫ್ರಾನ್ಸ್‌ಲ್ಲಿ ಪ್ರಸಕ್ತ 28143 ಮಂದಿ ಚಿಕಿತ್ಸೆ ಪಡೆಯುತ್ತಿದ್ದು,ಹಿಂದಿಗಿಂತ 711ರಷ್ಟು ಅಧಿಕವಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News