ದಿಲ್ಲಿ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧರ್ಮಗುರು ಕೊರೋನಕ್ಕೆ ಬಲಿ

Update: 2020-04-06 05:02 GMT

ಜೊಹಾನ್ಸ್‌ಬರ್ಗ್, ಎ.6: ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ಇತ್ತೀಚೆಗೆ ನಡೆದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕದ ಮುಸ್ಲಿಂ ಧರ್ಮಗುರುವೊಬ್ಬರು ನೋವಲ್ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿರುವುದನ್ನು ಅವರ ಕುಟುಂಬ ದೃಢಪಡಿಸಿದೆ.

ಮೌಲಾನಾ ಯೂಸುಫ್ ತೂತ್ಲಾ (80) ಮೃತಪಟ್ಟವರು. ಇವರು ಮಾರ್ಚ್ 1ರಿಂದ 15ರವರೆಗೆ ನಡೆದ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆನ್ನಲಾಗಿದೆ. ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ಭಾರತದ ವಿವಿಧೆಡೆಗಳ ಹಲವು ಮಂದಿಗೆ ಸೋಂಕು ತಗುಲಿತ್ತು. ಕಳೆದ ಮಂಗಳವಾರ ತೂತ್ಲಾ ಮೃತಪಟ್ಟಿದ್ದು, ಇಸ್ಲಾಮಿಕ್ ಬರಿಯಲ್ ಕೌನ್ಸಿಲ್ (ಐಬಿಸಿ) ನಿಂದ ಅವರ ಮೃತದೇಹವನ್ನು ಚೀಲವೊಂದರಲ್ಲಿ ಪಡೆದು ದಫನ ಮಾಡಲಾಗಿದೆ. 

ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 1,585 ಕೊರೋನ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 9 ಮಂದಿ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News