ಮೆಸ್ಸಿ ಅಪ್ಪಟ, ಪರಿಶುದ್ಧ ಪ್ರತಿಭೆ

Update: 2020-04-06 05:26 GMT

ಸಾವ್‌ಪೌಲೊ, ಎ.5: ಅರ್ಜೆಂಟೀನದ ಲಿಯೊನೆಲ್ ಮೆಸ್ಸಿ ಹಾಗೂ ಅವರ ಎದುರಾಳಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊರ ಪೈಕಿ ಯಾರು ವಿಶ್ವಶ್ರೇಷ್ಠ ಆಟಗಾರ ಎಂಬ ಚರ್ಚೆಯಲ್ಲಿ ನಾನು ಮೆಸ್ಸಿಯತ್ತ ವಾಲುವೆ. ಅವರೋರ್ವ ಅಪ್ಪಟ ಹಾಗೂ ಪರಿಶುದ್ಧ ಪ್ರತಿಭೆ. ಅವರ ಆಟದ ಶೈಲಿ ಅಮೋಘ ಎಂದು ಬ್ರೆಝಿಲ್ ಫುಟ್ಬಾಲ್ ದಿಗ್ಗಜ ಕಾಕಾ ಅಭಿಪ್ರಾಯಪಟ್ಟರು.

‘‘ನಾನು ರೊನಾಲ್ಡೊರೊಂದಿಗೆ ಆಡಿದ್ದೇನೆ. ಅವರೊಬ್ಬ ಅದ್ಭುತ ಆಟಗಾರ, ಆದರೆ ನನಗೆ ಮೆಸ್ಸಿ ಎಂದರೆ ತುಂಬಾ ಇಷ್ಟ. ಈ ಇಬ್ಬರು ಆಟಗಾರರು ಫುಟ್ಬಾಲ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠರಾಗಿದ್ದಾರೆ. ರೊನಾಲ್ಡೊ ಯಂತ್ರವಿದ್ದಂತೆ. ಅವರು ಬಲಿಷ್ಠ, ಶಕ್ತಿಶಾಲಿ ಹಾಗೂ ವೇಗವಾಗಿ ಆಡಬಲ್ಲರು ಮಾತ್ರವಲ್ಲ ಮಾನಸಿಕವಾಗಿ ಬಲಿಷ್ಠರಾಗಿದ್ದಾರೆ. ಅವರು ಯಾವಾಗಲೂ ಪಂದ್ಯ ಗೆಲ್ಲಲು ಬಯಸುತ್ತಾರೆ’’ ಎಂದರು.

 ಕಳೆದ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದಿಂದ ಯಾರು ಶ್ರೇಷ್ಠರು ಎಂಬ ಚರ್ಚೆ ವಿಶ್ವ ಫುಟ್ಬಾಲ್‌ನ ಒಂದು ವಿಶಿಷ್ಟ ಲಕ್ಷಣವಾಗಿ ಉಳಿದಿದೆ. 2008 ಹಾಗೂ 2018ರ ನಡುವೆ ರೊನಾಲ್ಡೊ ಹಾಗೂ ಮೆಸ್ಸಿ ಪ್ರತಿಷ್ಠಿತ ಬ್ಯಾಲನ್ ಡಿ’ಒರ್ ಪ್ರಶಸ್ತಿ ಜಯಿಸಿದ್ದರು. ಈ ಜೋಡಿ ಪ್ರಾಬಲ್ಯ ಸಾಧಿಸುವ ಮೊದಲು ಕಾಕಾ ಕೊನೆಯ ಬಾರಿ ಈ ಪ್ರಶಸ್ತಿಯನ್ನು ಪಡೆದ ಆಟಗಾರನಾಗಿದ್ದರು. ಕಾಕಾ ಐದು ವರ್ಷಗಳ ಕಾಲ ರೊನಾಲ್ಡೊರೊಂದಿಗೆ ರಿಯಲ್ ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್‌ನಲ್ಲಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News