ಕೋವಿಡ್-19 ಸೋಂಕು ತಗಲಿ 10 ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾದ ಬ್ರಿಟನ್ ಪ್ರಧಾನಿ

Update: 2020-04-06 06:05 GMT

ಲಂಡನ್,ಎ.6: ಕೊರೋನ ವೈರಸ್ ತಗಲಿ 10 ದಿನಗಳ ಬಳಿಕ ತಪಾಸಣೆಗಾಗಿ ಬ್ರಿಟನ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

ಜಾನ್ಸನ್ ಕೊರೋನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು. ತನಗೆ ಕೋವಿಡ್-19 ತಗಲಿರುವ ಸಣ್ಣ ಲಕ್ಷಣ ಕಾಣಿಸಿಕೊಂಡಿದೆ ಎಂದು 55ರ ವಯಸ್ಸಿನ ಜಾನ್ಸನ್ ಮಾ.27ರಂದು ಬಹಿರಂಗಪಡಿಸಿದ್ದರು. ಕಳೆದ ಏಳು ದಿನಗಳಿಂದ ತನ್ನ ಡೌವ್ನಿಂಗ್ ಸ್ಟ್ರೀಟ್ ನಿವಾಸದಲ್ಲಿ ಸ್ವಯಂ ಪ್ರತ್ಯೇಕತೆ ಕಾಯ್ದುಕೊಂಡಿದ್ದರು.

ವೈದ್ಯರ ಸಲಹೆಯ ಮೇರೆಗೆ ಇಂದು ರಾತ್ರಿ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಮುನ್ನಚ್ಚ್ಚೆರಿಕೆಯ ಹೆಜ್ಜೆಯಾಗಿದೆ. ಪ್ರಧಾನಮಂತ್ರಿಯ ಕರೋನ ವೈರಸ್ ಪರೀಕ್ಷೆಯಲ್ಲಿ ಧನಾತ್ಮಕ ವರದಿ ಬಂದ 10 ದಿನಗಳ ಬಳಿಕ ನಿರಂತರ ಕೊರೋನ ಲಕ್ಷಣ ಕಾಣಿಸಿಕೊಂಡಿದೆ. ದೇಹದ ಉಷ್ಣಾಂಶ ಹೆಚ್ಚಾಗಿದ್ದ ಕಾರಣ ಮನೆಯಲ್ಲಿ ಉಳಿದಿದ್ದರು. ಜಾನ್ಸನ್ ತುರ್ತುಸ್ಥಿತಿಯಲ್ಲಿ ಆಸ್ಪತ್ರಗೆ ದಾಖಲಾಗಿಲ್ಲ. ಈಗಿನ ಲಕ್ಷಣ ಸೂಕ್ಷ್ಮವಾಗಿರುವುದನ್ನು ಪರಿಗಣಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾನ್ಸನ್ ವೈರಸ್ ಸೋಂಕಿಗೆ ಒಳಗಾಗಿರುವ ವಿಶ್ವದ ಗಣ್ಯ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News