ಕೌಟಂಬಿಕ ಕಲಹದಿಂದ ನೊಂದ ಕಂದಮ್ಮನ ಕೂಗಿಗೆ ಸ್ಪಂದನೆ

Update: 2020-04-06 15:00 GMT

ಉಡುಪಿ, ಎ.6: ಕೌಟಂಬಿಕ ಕಲಹದಿಂದ ನೊಂದ 10 ತಿಂಗಳ ಕಂದಮ್ಮನ ಕೂಗಿಗೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸ್ಪಂದಿಸಿರುವ ಘಟನೆ ಇಂದು ನಡೆದಿದೆ.

ಉಡುಪಿ ಪಣಿಯಾಡಿ ಸಮೀಪದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿ ರುವ ಉತ್ತರಕನ್ನಡ ಜಿಲ್ಲೆಯ ದಂಪತಿ ಕೌಟಂಬಿಕ ಕಲಹದಿಂದ 10 ತಿಂಗಳ ಕಂದಮ್ಮನಿಗೆ ಹೊಡೆಯುತ್ತಿರುವ ಕುರಿತು ಬಂದ ದೂರಿನಂತೆ ತಕ್ಷಣ ಸ್ಪಂದಿಸಿದ ಮಹಿಳಾ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕಿ ಮುಕ್ತಾ ಬಾಯಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಸೇವಕ ವಿಶು ಶೆಟ್ಟಿ ಸ್ಥಳಕ್ಕೆ ತೆರಳಿದರು.

ಬಳಿಕ ಆ ದಂಪತಿಯನ್ನು ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅವರ ಮೂಲಕ ಸೂಕ್ತ ಆಪ್ತ ಸಮಾಲೋಚನೆ ನೀಡಲಾಯಿತು. ಇನ್ನು ಮುಂದೆ ಗಂಡ ಹೆಂಡತಿ ಅನ್ಯೋನ್ಯತೆ ಯಿಂದ ಹಾಗು ಕಂದಮ್ಮನನ್ನು ಚೆನ್ನಾಗಿ ನೋಡಿಕೊಳ್ಳುದಾಗಿಯೂ ದಂಪತಿ ತಿಳಿಸಿದ್ದು, ಅದರಂತೆ ಅವರನ್ನು ಮನೆಗೆ ಕರೆದುಕೊಂಡು ಹೋಗಿ ಬಿಡ ಲಾಯಿತು. ಅಲ್ಲದೆ ಇದೇ ಸಂದರ್ಭ ದಲ್ಲಿ ಕೋವಿಡ್ 19 ಬಗ್ಗೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆಯೂ ಅರಿವು ಮೂಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News