ರಕ್ತದ ಕೊರತೆ: ತುರ್ತು ಕರೆಗೆ ಸ್ಪಂದಿಸಿದ ಬಂಟಕಲ್ಲು ಬಳಗ

Update: 2020-04-06 15:55 GMT

ಶಿರ್ವ, ಎ. 6: ಕೊರೋನ ಲಾಕ್‌ಡೌನ್‌ನ ಪರಿಣಾಮ ರಕ್ತದ ಕೊರತೆಯಾಗಿ ರುವ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿಯ ಕರೆಗೆ ತಕ್ಷಣ ಸ್ಪಂದಿಸಿರುವ ಬಂಟಕಲ್ಲು ಅಮ್ಚೆ ಗಾಂವ್ ಅಮ್ಚೆ ಸಮಾಜ್ ವಾಟ್ಸಪ್ ಗ್ರೂಪ್‌ನ ಸದಸ್ಯರು ರಕ್ತದಾನ ಮಾಡಿದ್ದಾರೆ.

ಲಾಕ್‌ಡೌಮ್‌ನಿಂದಾಗಿ ರಕ್ತದಾನ ಶಿಬಿರಗಳು ಸ್ಥಗಿತಗೊಂಡಿದ್ದು, ಆಸ್ಪತ್ರೆ ಗಳಲ್ಲಿ ತುರ್ತುರಕ್ತದ ಕೊರತೆ ಅನುಭವಿಸುತ್ತಿದೆ. ಈ ಸಂದರ್ಭದಲ್ಲಿ 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ್ದಲ್ಲದೆ ಹಲವು ರಕ್ತದಾನ ಶಿಬಿರಗಳನ್ನು ಸಂಘ ಟಿಸಿದ್ದ ರಕ್ತದಾನಿ ದೇವದಾಸ್ ಪಾಟ್ಕರ್ ಮುದರಂಗಡಿ ನೇತೃತ್ವದ ಬಂಟಕಲ್ಲು ಅಮ್ಚೆ ಗಾಂವ್ ಅಮ್ಚೆ ಸಮಾಜ್ ವಾಟ್ಸಪ್ ಗ್ರೂಪ್‌ನ 18 ಸದಸ್ಯರು ಸೋಮವಾರ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದರು.

ಗ್ರೂಪ್‌ನ ಅಡ್ಮಿನ್ ಕೆ.ಆರ್.ಪಾಟ್ಕರ್, ಯುವವೃಂದದ ಅಧ್ಯಕ್ಷ ವೀರೇಂದ್ರ ಪಾಟ್ಕರ್, ದೇವಳದ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಸೇನಾನಿ ರಾಜೇಂದ್ರ ಪಾಟ್ಕರ್, ರಘುನಾಥ್ ನಾಯಕ್ ಪುನಾರು, ವಿಶ್ವನಾಥ್ ಬಾಂದೇಲ್ಕರ್ ಬಂಟಕಲ್ಲು, ರಾಘವೇಂದ್ರ ನಾಯಕ್ ಮಾಣಿಪಾಡಿ, ಸಂತೋಷ್ ನಾಯಕ್ ಮಾಣಿಪಾಡಿ, ರವಿರಾಜ್ ನಾಯಕ್ ಪುನಾರು, ವಿಶ್ವನಾಥ್ ನಾಯಕ್ ಪುನಾರು ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News