ಲಾಕ್​ಡೌನ್ ನಡುವೆ ಪಾಣೆಮಂಗಳೂ ಎಸ್ಸೆಸ್ಸೆಫ್, ಎಸ್ ವೈಎಸ್ ನಿಂದ ಮಾನವೀಯ ಸೇವೆ

Update: 2020-04-06 17:05 GMT

ಬಂಟ್ವಾಳ, ಎ.6: ಕೋವಿಡ್-19 ಹಿನ್ನೆಲೆ ಘೋಷಿಸಲಾಗಿರುವ ಲಾಕ್​ಡೌನ್ ನಿಂದ ತತ್ತರಿಸಿದ ಜನತೆಗೆ ಪಾಣೆಮಂಗಳೂರು ಎಸ್ಸೆಸ್ಸೆಫ್ ಕ್ಯೂ-ಟೀಮ್ ಮತ್ತು ಎಸ್.ವೈ.ಎಸ್ ಇಸ್ವಾಬ ತಂಡದಿಂದ ಅಗತ್ಯ ತುರ್ತು ಸೇವೆ ಒದಗಿಸಲಾಯಿತು. 

ಊರು ತಲುಪಲು ವಾಹನಗಳಿಲ್ಲದೆ ಪರದಾಡುತ್ತಿದ್ದ ಪ್ರಯಾಣಿಕರಿಗೆ, ಆಸ್ಪತ್ರೆ ತಲುಪಲು ಪ್ರಯಾಸಪಡುತ್ತಿದ್ದ ರೋಗಿಗಳಿಗೆ ತಮ್ಮ ತುರ್ತು ವಾಹನಗಳ ಮೂಲಕ ಸಾಂತ್ವನ ನೀಡಿದರು. ಜತೆಗೆ ಲಾಕ್​ಡೌನ್ ಕಾರಣ ದಿನಬಳಕೆಯ ಆಹಾರ ಸಾಮಾಗ್ರಿಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ ನಂದಾವರ, ಆಲಡ್ಕ,ಗೂಡಿನಬಳಿ, ರೆಂಗೇಲ್, ಕಾರಾಜೆ, ಬೊಳ್ಳಾಯಿ, ಆಲಂಪಾಡಿ ಕೊಳಕೆ, ಸಜಿಪ, ಚಟ್ಟಕ್ಕಲ್, ತಲೆಮುಗೇರು ಪ್ರದೇಶಗಳ ಸುಮಾರು 200ರಷ್ಟು ಅರ್ಹ ಕುಟುಂಬಗಳಿಗೆ ಮೊದಲ ಹಂತದ ರಿಲೀಫ್ ಕಿಟ್ ಅನ್ನೂ ವಿತರಿಸಲಾಯಿತು.

ಅದೇ ರೀತಿ ಸರ್ಕಾರ ಸೂಚಿಸಿದ ಸುರಕ್ಷಾ ಕ್ರಮವನ್ನು ಪಾಲಿಸುವ ಸಲುವಾಗಿ ಅಗತ್ಯ ಮಾಸ್ಕ್'ಗಳ ತಯಾರಿಕೆ ಮತ್ತು ವಿತರಣೆ ನಡೆಯಿತು. ಬಂಟ್ವಾಳ ನಗರ ಠಾಣೆ, ಬಂಟ್ವಾಳ ಗ್ರಾಮಾಂತರ ಠಾಣೆ ಮತ್ತು ಮೆಲ್ಕಾರ್ ಟ್ರಾಫಿಕ್ ಠಾಣೆಗಳಲ್ಲಿ ಸೇವಾ ನಿರತರಾಗಿರುವ ಪೋಲಿಸ್ ಸಿಬ್ಬಂದಿಗಳಿಗೂ ಅಗತ್ಯ ಮಾಸ್ಕ್ ಮತ್ತು ಗ್ಲೌಸ್ ಅನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News