ಸಂಕಷ್ಟದಲ್ಲಿರುವ 600 ಕಾರ್ಮಿಕರಿಗೆ ಊಟ ನೀಡುತ್ತಿರುವ 'ಟೈಮ್ಸ್ ಆಫ್ ಅಂಗರಗುಂಡಿ'

Update: 2020-04-06 18:06 GMT

ಮಂಗಳೂರು: ಲಾಕ್ ಡೌನ್ ನಂತರ ಊಟವಿಲ್ಲದೆ ಕಂಗಾಲಾಗಿರುವ ಸುಮಾರು 600 ಮಂದಿ ಕಾರ್ಮಿಕರಿಗೆ ಬೈಕಂಪಾಡಿಯ ಅಂಗರಗುಂಡಿಯಲ್ಲಿ 'ಟೈಮ್ಸ್ ಆಫ್ ಅಂಗರಗುಂಡಿ' ವತಿಯಿಂದ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ.

ಇಲ್ಲಿ ವಿವಿಧೆಡೆ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರಿಗೆ, ಕಟ್ಟಡ ಕಾರ್ಮಿಕರಿಗೆ ರಾತ್ರಿಯ ವೇಳೆ ಊಟದ ನೀಡಲಾಗುತ್ತಿದೆ. ವಾಟ್ಸ್ಯಾಪ್ ಗ್ರೂಪ್ ನಲ್ಲಿರುವ 10-15 ಯುವಕರು ಈ ಸೇವೆಯಲ್ಲಿದ್ದು ರಾತ್ರಿ 7:30ರಿಂದ 9:30ರವರೆಗೆ ಆಹಾರ ವಿತರಿಸುತ್ತಾರೆ.

ಈಗಾಗಲೇ 8 ದಿನಗಳ ಕಾಲ ಈ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ಲಾಕ್ ಡೌನ್ ಇರುವವರೆಗೂ ಮುಂದುವರಿಸುವ ಉದ್ದೇಶವಿದೆ ಎಂದು ಗ್ರೂಪ್ ನಲ್ಲಿ ಒಬ್ಬರಾದ ನಿಯಾಝ್ ಹೇಳುತ್ತಾರೆ.

"ನಮ್ಮ ಗ್ರೂಪ್ ನ ವತಿಯಿಂದ ಈಗಾಗಲೇ 600 ಜನರಿಗೆ ಊಟ ನೀಡುತ್ತಿದ್ದೇವೆ. ಇದೀಗ ತೋಕೂರಿನಲ್ಲಿರುವ 40-50 ಜನರಿಗೆ ಊಟ ಬೇಕೆಂದು ಕೆಲವರು ಕೇಳಿದ್ದಾರೆ. ಹಾಗಾಗಿ 3 ದಿನಗಳಿಂದ ಅವರಿಗೂ ಊಟ ನೀಡಲಾಗುತ್ತಿದೆ.  ಇಲ್ಲಿ ಕರ್ನಾಟಕದ ಬಿಜಾಪುರ, ಗುಲ್ಬರ್ಗ, ರಾಯಚೂರಿನವರು ಮಾತ್ರವಲ್ಲದೆ ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಅಸ್ಸಾಂ, ಜಾರ್ಖಂಡ್ ನ ಕಾರ್ಮಿಕರೂ ಇದ್ದಾರೆ. ಪ್ರಚಾರವಿಲ್ಲದೆ ಕೆಲಸ ಮಾಡುವುದು ನಮ್ಮ ಉದ್ದೇಶ. ಕಾರ್ಮಿಕರ ಹಸಿವೂ ನೀಗಬೇಕು ಮತ್ತು ಈ ಸೇವೆಯಿಂದ ನಾವು ಪ್ರಚಾರವನ್ನೂ ಪಡೆದುಕೊಳ್ಳಬಾರದು ಎನ್ನುವ ಉದ್ದೇಶವೂ ನಮ್ಮಲ್ಲಿದೆ" ಎಂದವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News