ರವಿವಾರ ವಿದ್ಯುತ್ ಬೇಡಿಕೆ ಕುಸಿದರೂ ಕಂಪನಾಂಕ ಸ್ಥಿರವಾಗಿತ್ತು: ಕೇಂದ್ರ ಸರಕಾರ

Update: 2020-04-06 18:12 GMT

ಹೊಸದಿಲ್ಲಿ, ಎ.6: ಪ್ರಧಾನಿ ಮೋದಿಯ ಕರೆಯಂತೆ ಎಪ್ರಿಲ್ 5ರಂದು ರಾತ್ರಿ 9 ಗಂಟೆಗೆ ನಡೆದ ದೀಪ ಆರಿಸುವ ಅಭಿಯಾನದಿಂದ ಸ್ವಲ್ಪ ಹೊತ್ತು ವಿದ್ಯುತ್ ಬೇಡಿಕೆ ಕುಸಿದರೂ ಕಂಪನದ ದರವನ್ನು ಕಾಯ್ದುಕೊಳ್ಳಲಾಗಿದೆ ಮತ್ತು ವಿದ್ಯುತ್‌ಶಕ್ತಿಯ ಪ್ರಮಾಣ (ವೋಲ್ಟೇಜ್) ಸ್ಥಿರವಾಗಿತ್ತು ಎಂದು ಕೇಂದ್ರದ ಇಂಧನ ಸಚಿವ ಆರ್‌ಕೆ ಸಿಂಗ್ ಹೇಳಿದ್ದಾರೆ.

ರವಿವಾರ ರಾತ್ರಿ 8:49ರಿಂದ 9:09 ಗಂಟೆಯ ಅವಧಿಯಲ್ಲಿ ಬೇಡಿಕೆ 1,17,300 ಮೆಗಾವ್ಯಾಟ್‌ಗಳಿಂದ ಒಮ್ಮೆಲೇ 85,300 ಮೆಗಾವ್ಯಾಟ್‌ಗಳಿಗೆ ಕುಸಿಯಿತು. ಆದರೆ ಕಂಪನದ ದರವನ್ನು 49.7 ರಿಂದ 50.26 ಬ್ಯಾಂಡ್ ಹರ್ಟ್ಸ್‌ನಲ್ಲಿ ಕಾಯ್ದುಕೊಳ್ಳಲಾಗಿತ್ತು. ಅಂದರೆ ವೋಲ್ಟೇಜ್ ಸ್ಥಿರವಾಗಿತ್ತು ಎಂದು ಸಚಿವರು ಹೇಳಿದ್ದಾರೆ. ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಶನ್ ಸೇರಿದಂತೆ ರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಜ್ಯದ ಲೋಡ್ ಡಿಸ್ಪಾಚ್ ಕೇಂದ್ರಗಳು ಅದ್ಭುತ ಕಾರ್ಯ ನಿರ್ವಹಿಸಿವೆ ಎಂದು ಸಚಿವರು ಶ್ಲಾಘಿಸಿದರು.

ಯಾವುದೇ ರೀತಿಯ ಲೋಡ್ ವ್ಯತ್ಯಯವನ್ನು ತಾಳಿಕೊಳ್ಳಲು ಭಾರತದ ವಿದ್ಯುತ್ ಗ್ರಿಡ್‌ಗಳು ಸಮರ್ಥವಾಗಿವೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News