ಅಂತ್ಯಸಂಸ್ಕಾರದಲ್ಲಿ 1000 ಮಂದಿ ಭಾಗಿ: ಬ್ರಿಟನ್ ನ ಇಸ್ಕಾನ್ ನಲ್ಲಿ 5 ಮಂದಿ ಕೊರೋನದಿಂದ ಮೃತ್ಯು

Update: 2020-04-07 12:58 GMT

ಹೊಸದಿಲ್ಲಿ: ಜಗತ್ತಿನಾದ್ಯಂತ 1.3 ಮಿಲಿಯನ್ ಜನರು ಕೊರೋನ ವೈರಸ್ ಸೋಂಕು ಪೀಡಿತರಾಗಿದ್ದು, ಬ್ರಿಟನ್ ನಲ್ಲಿರುವ ಇಸ್ಕಾನ್ ಸಂಸ್ಥೆಯೂ ಸಂಕಷ್ಟದಲ್ಲಿದೆ.

ಲಂಡನ್ ನಲ್ಲಿ 15 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಇಸ್ಕಾನ್ ನಲ್ಲಿ 21 ಕೊರೋನ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, ಐವರು ಈಗಾಗಲೇ ಮೃತಪಟ್ಟಿದ್ದಾರೆ.

3 ದಶಕಗಳಿಂದ ಇಸ್ಕಾನ್ ಸದಸ್ಯರಾಗಿರುವ 70 ವರ್ಷದ ರಾಮೇಶ್ವರ ದಾಸ್ ಇತ್ತೀಚೆಗಷ್ಟೇ ಕೊನೆಯುಸಿರೆಳೆದಿದ್ದಾರೆ. ಬ್ರಿಟನ್ ನಲ್ಲಿ ಇಸ್ಕಾನ್ ಸೇರಿದವರಲ್ಲಿ ಮೊದಲಿಗರಾದ ಧನಂಜನ್ ದಾಸ್ ಕೊರೋನ ಸೋಂಕಿಗೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ.

ಮಾರ್ಚ್ 12ರಂದು ನಡೆದ ಸದಸ್ಯರೊಬ್ಬರ ಅಂತ್ಯಸಂಸ್ಕಾರದಲ್ಲಿ 1000 ಮಂದಿ ಭಾಗವಹಿಸಿದ್ದೇ ವೈರಸ್ ಇಲ್ಲಿ ಹರಡಲು ಕಾರಣ ಎಂದು ಆರೋಪಿಸಲಾಗಿದೆ. ಆ ಸಮಯದಲ್ಲಿ ಬ್ರಿಟನ್ ನಲ್ಲಿ ಯಾವುದೇ ನಿರ್ಬಂಧವಿರಲಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News