ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್, ಡಿವಿಷನ್ ಗಳಲ್ಲಿ ತುರ್ತು ಸೇವೆ

Update: 2020-04-07 13:25 GMT

ಮಂಗಳೂರು : ದೇಶದಾದ್ಯಂತ ಲಾಕ್'ಡೌನ್ ನಿಂದ  ಸಂಕಷ್ಟಕ್ಕೆ ಒಳಾಗದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್'ನ ನಿರ್ದೇಶನದಂತೆ ದ.ಕ ವೆಸ್ಟ್ ಝೋನ್ ಅಧೀನದ  ಆರು ಡಿವಿಷನ್ ಡಿವಿಷನ್'ಗಳ ವ್ಯಾಪ್ತಿಯಲ್ಲಿ ಕ್ಯೂ-ಟೀಮ್  ಕಾರ್ಯಕರ್ತರನ್ನೊಳಗೊಂಡ ತಂಡಗಳ ಮೂಲಕ  ತುರ್ತು ಸೇವೆಗಳನ್ನು ಮಾಡಲಾಗುತ್ತಿದೆ.

"ಕೊರೋನ ಹಸಿದವರಿಗೆ ಅನ್ನ ಕೊಡೋಣ" ಎಂಬ ಧ್ಯೇಯ ವಾಕ್ಯದೊಂದಿಗೆ ದ.ಕ ವೆಸ್ಟ್  ಝೋನ್ ಹಾಗೂ ಝೋನ್  ವ್ಯಾಫ್ತಿಯ ಡಿವಿಷನ್, ಸೆಕ್ಟರ್,  ಶಾಖಾ ಕೇಂದ್ರಗಳಲ್ಲಿ ಅರ್ಹ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ, ಬೇರೆ ಬೇರೆ ಊರಿನಿಂದ ಬಂದು  ಲಾಕ್ ಡೌನ್ ನಿಂದಾಗಿ ಸಮಸ್ಯೆಗೆ ಒಳಗಾದವರಿಗೆ ಹಾಗೂ ಹೊರ ರಾಜ್ಯಗಳಿಂದ ಕೂಲಿ ಕೆಲಸಕ್ಕಾಗಿ ಬಂದು ರಸ್ತೆ ಬದಿಯಲ್ಲಿ ಆಹಾರವಿಲ್ಲದೆ ಕಷ್ಟ ಪಡುವ ಜನರಿಗೆ  ಆಹಾರ ವಿತರಣೆಯನ್ನು ಮಾಡಲಾಗುತ್ತಿದೆ.

ಗರ್ಭಿಣಿ ಮಹಿಳೆಯರನ್ನು, ಡಯಾಲಿಸಿಸ್ ಮಾಡಬೇಕಾದವರನ್ನು  ಹಾಗೂ ಇತರ  ರೋಗಗಳಿಂದ ಬಳಲುತ್ತಿರುವವರನ್ನು ಆಸ್ಪತ್ರೆಗಳಿಗೆ ತಲುಪಿಸಲು, ಔಷಧಿಗಳನ್ನು ತರಲು,  ಒಂದು ಕಡೆಗೆ  ಹೋಗಿ ತಿರುಗಿ ಬರಲಾಗದೆ  ಸಮಸ್ಯೆಗೆ ಒಳಗಾದವರಿಗೆ  ಡಿವಿಷನ್ ಹಾಗೂ ಸೆಕ್ಟರ್ ವ್ಯಾಪ್ತಿಯಲ್ಲಿ ತುರ್ತು ವಾಹನ ವ್ಯವಸ್ಥೆಯನ್ನು ಮಾಡಲಾಗಿದ್ದು, ತುರ್ತು ಸೇವೆಯನ್ನು ಮಾಡಲಾಗುತ್ತಿದೆ.

ಎಸ್ಸೆಸ್ಸೆಫ್  ದ.ಕ.ಜಿಲ್ಲಾ ವೆಸ್ಟ್ ಝೋನ್ ಭಾಗದ  ಹಲವಾರು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಆಸ್ಪತ್ರೆಗಳಿಗೆ ತೆರಳಿ ರಕ್ತದಾನ  ಮಾಡಿರುತ್ತಾರೆ. ಉಳ್ಳಾಲ, ಸುರತ್ಕಲ್, ಮಂಗಳೂರು, ಬಂಟ್ವಾಳ, ಮೂಡಬಿದ್ರೆ ಹಾಗೂ ಮುಡಿಪು ಭಾಗದಲ್ಲಿ ಸಮಸ್ಯೆಗೆ ಒಳಗಾದ ಆಫ್ರಿಕನ್ ಪ್ರಜೆ,  ಗಂಗಾವತಿ ಸಿದ್ದು, ನೂರಾರು  ಜನರು ಸಮಸ್ಯೆಗೆ ಒಳಗಾದ ಸಂದರ್ಭದಲ್ಲಿ,  ಎಸ್ಸೆಸ್ಸೆಫ್ ದ.ಕ ಜಿಲ್ಲಾ ವೆಸ್ಟ್ ಝೋನ್ ಅಧಿನದಲ್ಲಿರುವ ಕಾರ್ಯಕರ್ತರು  ಅವರ ಬಳಿ ತೆರಲಿ ಅವರಿಗೆ ಸಹಾಯವನ್ನು ಮಾಡಿದ್ದಾರೆ.  ಈ ಎಲ್ಲಾ ಸೇವೆಗಳು ಪ್ರಸ್ತುತವಾಗಿಯೂ ಚಾಲ್ತಿಯಲ್ಲಿದೆವೆಂದು ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೋನ್ ಅಧ್ಯಕ್ಷರು ಮುನೀರ್ ಸಖಾಫಿ, ಉಳ್ಳಾಲ ಹಾಗೂ ಪ್ರಧಾನ ಕಾರ್ಯದರ್ಶಿ ಹೈದರ್ 4ನೇ ಬ್ಲಾಕ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News