ಕೋಮು ಪ್ರಚೋದಕ ಭಿತ್ತಿಪತ್ರ ಅಂಟಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2020-04-07 14:32 GMT

ಮಂಗಳೂರು, ಎ.7: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರು ಉದ್ಯೋಗವಿಲ್ಲದೆ ಒಪ್ಪೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ನಗರ ಪ್ರದೇಶ ಸಂಪರ್ಕಿಸಲು ಜನರಿಗೆ ಸಾಧ್ಯವಾಗದಿರುವುದರಿಂದ ಕೆಲವು ವ್ಯಾಪಾರಿಗಳು ಒಳ ಪ್ರದೇಶಕ್ಕೆ ತೆರಳಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ಆ ಪೈಕಿ ಮುಸ್ಲಿಂ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ವ್ಯಾಪಾರಿಗಳು ಮುಸ್ಲಿಂ ಸಮುದಾಯದವರು ಎಂಬ ಏಕೈಕ ಕಾರಣಕ್ಕೆ ತಮ್ಮ ಊರಿಗೆ ಪ್ರವೇಶವಿಲ್ಲ ಎಂಬ ಭಿತ್ತಿಪತ್ರವನ್ನು ಅಳಪೆ ದಕ್ಷಿಣ ವಾರ್ಡಿನ ಭಜನಾ ಮಂದಿರದ ಬಳಿ ಸೋಮವಾರ  ಅಂಟಿಸಿ ಕೋಮುಭಾವನೆ ಕೆರಳಿಸುವಂತಹ ಪ್ರಯತ್ನ ನಡೆಸಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯ ನಿರೀಕ್ಷರಿಗೆ ಸಿಪಿಎಂ ಅಳಪೆ ದಕ್ಷಿಣ ವಾರ್ಡಿನ ಕಾರ್ಯದರ್ಶಿ ವರಪ್ರಸಾದ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News