ಜಗತ್ತಿನಾದ್ಯಂತ 60 ಲಕ್ಷ ನರ್ಸ್‌ಗಳ ಕೊರತೆ: ವಿಶ್ವ ಆರೋಗ್ಯ ಸಂಸ್ಥೆ

Update: 2020-04-07 14:42 GMT
ಫೈಲ್ ಚಿತ್ರ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಎ. 7: ಮಾರಕ ಕೋವಿಡ್-19 ಕಾಯಿಲೆಯನ್ನು ಎದುರಿಸುವ ನಿಟ್ಟಿನಲ್ಲಿ ಜಗತ್ತು ಸುಮಾರು 60 ಲಕ್ಷ ನರ್ಸ್‌ಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒಕ) ಮಂಗಳವಾರ ಎಚ್ಚರಿಸಿದೆ.

‘ನರ್ಸಿಂಗ್ ನೌ’ ಮತ್ತು ಇಂಟರ್‌ನ್ಯಾಶನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್) ಸಂಘಟನೆಗಳ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆಯು ಸಿದ್ಧಪಡಿಸಿದ ವರದಿಯೊಂದರಲ್ಲಿ, ನರ್ಸ್‌ಗಳು ವಹಿಸುವ ಮಹತ್ವದ ಪಾತ್ರವನ್ನು ಪ್ರಸ್ತಾಪಿಸಲಾಗಿದೆ. ಜಗತ್ತಿನಲ್ಲಿರುವ ಒಟ್ಟು ಆರೋಗ್ಯ ಶುಶ್ರೂಷಕರ ಪೈಕಿ 50 ಶೇಕಡಕ್ಕೂ ಅಧಿಕ ಮಂದಿ ನರ್ಸ್‌ಗಳಾಗಿದ್ದಾರೆ ಎಂದು ಅದು ಹೇಳಿದೆ.

‘‘ನರ್ಸ್‌ಗಳು ಯಾವುದೇ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಜಗತ್ತಿನಲ್ಲಿ ಈಗ 2.8 ಕೋಟಿ ನರ್ಸ್‌ಗಳಿದ್ದಾರೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News