ಬೀಡಿ ಕಾರ್ಮಿಕರಿಗೆ ಪರಿಹಾರ ಧನ ನೀಡಲು ಐಟಕ್ ಒತ್ತಾಯ

Update: 2020-04-07 14:43 GMT

ಮಂಗಳೂರು, ಎ.7: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಹೇರಲಾದ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದಿಂದಾಗಿ ಜಿಲ್ಲೆಯ ಬೀಡಿ ಉದ್ಯಮ ಸ್ಥಗಿತಗೊಂಡಿದೆ. ಇದರಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಬೀಡಿಯ ಕೆಲಸವಿಲ್ಲದ ಕಾರಣ ಸಾವಿರಾರು ಮಂದಿಯ ಬದುಕು ಅತಂತ್ರವಾಗಿದೆ. ಆದಾಗ್ಯೂ ಈವರೆಗೆ ರಾಜ್ಯ ಸರಕಾರ ಬೀಡಿ ಕಾರ್ಮಿಕರಿಗೆ ಯಾವುದೇ ಪರಿಹಾರದ ಪ್ಯಾಕೇಜ್ ಘೋಷಿಸಿಲ್ಲ. ಹಾಗಾಗಿ ತಕ್ಷಣ ಬೀಡಿ ಕಾರ್ಮಿಕರಿಗೆ ಪರಿಹಾರ ಧನ ನೀಡಬೇಕು ಎಂದು ಐಟಕ್ ಒತ್ತಾಯಿಸಿದೆ.

ಮಾಲಕರು ಕೂಡ ಬೀಡಿ ಕೆಲಸಗಾರರ ನೆರವಿಗ ಬಂದಿಲ್ಲ. ಕಾನೂನು ಪ್ರಕಾರ ಪಾವತಿಯಾಗಬೇಕಿದ್ದ ಕನಿಷ್ಠ ವೇತನ ಹಾಗೂ ಬಾಕಿ ತುಟ್ಟಿಬತ್ತೆಗಳನ್ನೂ ನೀಡಿಲ್ಲ. ಹಾಗಾಗಿ ಸರಕಾರ ಮತ್ತು ಬೀಡಿ ಮಾಲಕರು ಕಾರ್ಯಪ್ರವೃತ್ತರಾಗಿ ಬೀಡಿ ಕಾರ್ಮಿಕರಿಗೆ ಮಾಸಿಕ 5,000 ರೂ.ಗಿಂತ ಕಡಿಮೆಯಿಲ್ಲದ ಪರಿಹಾರ ಧನ ಘೋಷಿಸಬೇಕು ಎಂದು ಎಸ್‌ಕೆ ಬೀಡಿ ವರ್ಕರ್ಸ್‌ ಫೆಡರೇಷನ್‌ನ ಅಧ್ಯಕ್ಷ ಕೆವಿ ಭಟ್ ಮತ್ತು ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News