ಬೀಗಮುದ್ರೆಯ ನಡುವೆಯೇ ಭಾರತದಿಂದ 1,300 ಅಮೆರಿಕನ್ನರು ವಾಪಸ್

Update: 2020-04-07 14:50 GMT

ವಾಶಿಂಗ್ಟನ್, ಎ. 7: ಭಾರತ ಸೇರಿದಂತೆ ದಕ್ಷಿಣ ಮತ್ತು ಮಧ್ಯ ಏಶ್ಯ ದೇಶಗಳಿಂದ 13 ವಿಮಾನಗಳಲ್ಲಿ ಸುಮಾರು 2,900 ಅಮೆರಿಕ ನಾಗರಿಕರನ್ನು ದೇಶಕ್ಕೆ ವಾಪಸ್ ಕರೆಸಲಾಗಿದೆ ಎಂದು ದೇಶದ ಹಿರಿಯ ರಾಜತಾಂತ್ರಿಕೆ ಆ್ಯಲಿಸ್ ವೆಲ್ಸ್ ಹೇಳಿದ್ದಾರೆ.

‘‘ಇಂದಿನವರೆಗೆ ಅಮೆರಿಕವು ದಕ್ಷಿಣ ಮತ್ತು ಮಧ್ಯ ಏಶ್ಯಗಳಿಂದ ಅಮೆರಿಕನ್ನರನ್ನು ವಾಪಸ್ ಕರೆತರಲು 13 ವಿಮಾನಗಳನ್ನು ನಿಯೋಜಿಸಿದೆ. ಅದರಲ್ಲೂ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಉಝ್ಬೆಕಿಸ್ತಾನ ಮತ್ತು ತುರ್ಕ್‌ಮೆನಿಸ್ತಾನಗಳಿಂದ ಸುಮಾರು 2,900 ಅಮೆರಿಕ ನಾಗರಿಕರನ್ನು ಕರೆತರಲು ವಿಶೇಷ ವಿಮಾನಗಳನ್ನು ಕಳಹಿಸಲಾಗಿದೆ’’ ಎಂದು ವೆಲ್ಸ್ ತಿಳಿಸಿದರು.

‘‘ಭಾರತದ ವಿವಿಧ ನಗರಗಳು ಮತ್ತು ಹಳ್ಳಿಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸಾವಿರಾರು ಅಮೆರಿಕನ್ನರು ನೆರವು ಕೋರಿ ಕಳುಹಿಸಿರುವ ಮನವಿಗಳಿಗೆ ನಾವು ಸ್ಪಂದಿಸುತ್ತಿದ್ದೇವೆ. ಈವರೆಗೆ, ಅಲ್ಲಿಂದ ಸುಮಾರು 1,300 ಭಾರತೀಯರನ್ನು ಬೀಗಮುದ್ರೆಯ ಹೊರತಾಗಿಯೂ ವಾಪಸ್ ಕರೆತಂದಿದ್ದೇವೆ’’ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News