ಜಪಾನ್‌ನಲ್ಲಿ ಕೊರೋನ ತುರ್ತು ಪರಿಸ್ಥಿತಿ ಘೋಷಣೆ : 74.63 ಲಕ್ಷ ಕೋಟಿ ರೂ. ನೆರವು ಯೋಜನೆ ಪ್ರಕಟ

Update: 2020-04-07 14:53 GMT

ಟೋಕಿಯೊ (ಜಪಾನ್), ಎ. 7: ವೇಗವಾಗಿ ಹರಡುತ್ತಿರುವ ನೂತನ-ಕೊರೋನವೈರಸ್ ಕಾಯಿಲೆಯ ವಿರುದ್ಧ ಹೋರಾಡುವುದಕ್ಕಾಗಿ ಜಪಾನ್‌ನ ಪ್ರಮುಖ ಜನಸಾಂದ್ರತೆಯ ನಗರಗಳಲ್ಲಿ ಪ್ರಧಾನಿ ಶಿಂಝೋ ಅಬೆ ಮಂಗಳವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ ಹಾಗೂ ಅದರಿಂದಾಗಿ ಜನರು ಎದುರಿಸುವ ಆರ್ಥಿಕ ಹೊಡೆತವನ್ನು ನಿವಾರಿಸಲು ಹಣಕಾಸು ಪ್ಯಾಕೇಜೊಂದಕ್ಕೆ ಅಂಗೀಕಾರ ನೀಡಿದ್ದಾರೆ.

ರಾಜಧಾನಿ ಟೋಕಿಯೊ ಮತ್ತು ಇತರ ಆರು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಒಂದು ತಿಂಗಳ ಕಾಲ ಜಾರಿಯಲ್ಲಿರುತ್ತದೆ. ಜಪಾನ್ ಜನಸಂಖ್ಯೆಯ 44 ಶೇಕಡ ತುರ್ತು ಪರಿಸ್ಥಿತಿಯ ವ್ಯಾಪ್ತಿಯಲ್ಲಿ ಬರುತ್ತಾರೆ.

990 ಬಿಲಿಯ ಡಾಲರ್ (ಸುಮಾರು 74.63 ಲಕ್ಷ ಕೋಟಿ ರೂಪಾಯಿ) ಮೊತ್ತದ ಹಣಕಾಸು ನೆರವಿಗೆ ಜಪಾನ್ ಸಚಿವ ಸಂಪುಟವು ಅಂತಿಮ ಅಂಗೀಕಾರ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News