ಚೀನಾ: ಹೊಸ ಕೊರೋನವೈರಸ್ ಸೋಂಕು ಪ್ರಕರಣಗಳಿಲ್ಲ

Update: 2020-04-07 14:55 GMT

ಬೀಜಿಂಗ್, ಎ. 7: ಕೊರೋನವೈರಸ್‌ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಚೀನಾ ಮಂಗಳವಾರ ವರದಿ ಮಾಡಿದೆ. ಚೀನಾ ಜನವರಿಯಲ್ಲಿ ಸಾವಿನ ಸಂಖ್ಯೆಯನ್ನು ವರದಿ ಮಾಡಲು ಆರಂಭಿಸಿದಂದಿನಿಂದ ಇದು ಮೊದಲ ಬಾರಿಯಾಗಿದೆ.

ಚೀನಾದಲ್ಲಿ ಕೊರೋನವೈರಸ್ ಪ್ರಕರಣಗಳು ಮಾರ್ಚ್‌ನಿಂದ ಕಡಿಮೆಯಾಗುತ್ತಿವೆ. ಆದರೆ, ದೇಶದಲ್ಲಿ ವಿದೇಶೀಯರನ್ನೊಳಗೊಂಡ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು ಎರಡನೇ ಹಂತದ ಸಾಂಕ್ರಾಮಿಕದ ಭೀತಿಯನ್ನು ಎದುರಿಸುತ್ತಿದೆ.

ವಿದೇಶೀಯರನ್ನೊಳಗೊಂಡ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ಸುಮಾರು 1,000ದಷ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ದೇಶಾದ್ಯಂತ ಹೊಸದಾಗಿ 32 ಕೊರೋನವೈರಸ್ ಪ್ರಕರಣಗಳು ದಾಖಲಾಗಿವೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ. ಅವರೆಲ್ಲರೂ ವಿದೇಶೀಯರು.

ಚೀನಾದಲ್ಲಿ ಈವರೆಗೆ 81,740 ಮಂದಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಆ ಪೈಕಿ 3,331 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನ ಸಾವುಗಳು ವುಹಾನ್ ನಗರ ಮತ್ತು ಹುಬೈ ಪ್ರಾಂತದಿಂದ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News