ಅಮೆರಿಕ: ಒಂದು ದಿನದಲ್ಲಿ 1,150 ಸಾವು

Update: 2020-04-07 15:37 GMT

ವಾಶಿಂಗ್ಟನ್, ಎ. 7: ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,150 ಕೊರೋನವೈರಸ್ ಸಾವುಗಳು ಸಂಭವಿಸಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಸೋಮವಾರ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಮಾರಕ ಸೋಂಕಿಗೆ ಬಲಿಯಾದವರ ಸಂಖ್ಯೆ 10,783ಕ್ಕೆ ಏರಿದೆ.

 ಇದೇ ಅವಧಿಯಲ್ಲಿ 30,000ಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 10,33,000ವನ್ನು ಮೀರಿದೆ. ಈಗ ಜಗತ್ತಿನಲ್ಲೇ ಅತಿ ಹೆಚ್ಚು ಕೊರೋನವೈರಸ್ ಸೋಂಕು ಪ್ರಕರಣಗಳು ಅಮೆರಿಕದಲ್ಲಿವೆ. ಹಲವು ದಿನಗಳಿಂದ ಅಲ್ಲಿ ಪ್ರತಿ ದಿನ ಕನಿಷ್ಠ 1,000 ಸಾವುಗಳು ಸಂಭವಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News