ಕೊವೀಡ್-19ನಿಂದ ಸುರಕ್ಷತೆಗಾಗಿ ಗೌನ್ ತಯಾರಿಕೆಯಲ್ಲಿ ತ್ರಿವೇಣಿ ಸಂಜೀವಿನಿ ಒಕ್ಕೂಟ ಸದಸ್ಯೆಯರು

Update: 2020-04-07 16:27 GMT

ಹೆಬ್ರಿ, ಎ.7: ನೋವೆಲ್ ಕೊರೋನ ವೈರಸ್ (ಕೋವಿಡ್-19) ವಿರುದ್ಧ ದಿಟ್ಟವಾಗಿ ಸೆಣಸುತ್ತಿರುವ ನರ್ಸ್‌ಗಳು ಹಾಗೂ ವೈದ್ಯರು ತೊಡುವ ಸುರಕ್ಷತಾ ದಿರುಸುಗಳ ಕೊರತೆ ಇದೀಗ ಭಾರೀ ಸುದ್ದಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕೊರೋನ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿರುವ ತಾಲೂಕಿನ ವರಂಗ ಗ್ರಾಪಂ ವ್ಯಾಪ್ತಿಯ ಮುನಿಯಾಲು ತ್ರಿವೇಣಿ ಸಂಜೀವಿನಿ ಒಕ್ಕೂಟದ ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಕೊರೊನಾ ಚಿಕಿತ್ಸೆಗಾಗಿ ಬಳಸುವ ಗೌನ್ ತಯಾರಿಕೆಯಲ್ಲಿ ಮಗ್ನರಾಗಿದ್ದಾರೆ.

ಮಣಿಪಾಲ ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಮೂಲಕ 10 ಕರಕುಶಲ ವಸ್ತುಗಳ ತರಬೇತಿ ಪಡೆದಿರುವ ಸದಸ್ಯರು ಯುವ ಉದ್ಯಮಿ ಮುನಿಯಾಲು ನಯನ್‌ಕುಮಾರ್ ಜೋಗಿ ಮಾರ್ಗದರ್ಶನದಲ್ಲಿ ವರಂಗ ಗ್ರಾಪಂ ಬೆಂಬಲದೊಂದಿಗೆ ಗೌನ್ ತಯಾರಿಸುತ್ತಿದ್ದಾರೆ.

15 ಮಹಿಳಾ ಸದಸ್ಯರು ಗೌನ್ ತಯಾರಿಕೆಯಲ್ಲಿ ಮಗ್ನರಾಗಿದ್ದು ಸ್ವಾವಲಂಬನೆ ಬದುಕಿನ ಆಸಕ್ತಿಯ ಜೊತೆಜೊತೆಗೆ ಸಾಮಾಜಿಕ ಕಳಕಳಿಯನ್ನು ಇವರು ಪ್ರದರ್ಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News