ಹೆಬ್ರಿ ವರ್ತಕರ ಸಂಘದಿಂದ ಬಡವರಿಗೆ ಅಕ್ಕಿ ವಿತರಣೆ

Update: 2020-04-07 16:29 GMT

ಹೆಬ್ರಿ, ಎ.7: ಹೆಬ್ರಿ ವರ್ತಕರ ಸಂಘದ ವತಿಯಿಂದ ಮಂಗಳವಾರ ತಾಲೂಕು ಆಡಳಿತದ ಮೂಲಕ ಬಡವರಿಗೆ ಅಕ್ಕಿ ಸಹಿತ ದಿಸಿ ಸಾಮಾಗ್ರಿಯನ್ನು ವಿತರಿಸಲಾಯಿತು.

ಹೆಬ್ರಿ ತಹಶೀಲ್ಧಾರ್ ಕೆ.ಮಹೇಶ್ಚಂದ್ರ, ವರ್ತಕರ ಸಂಘದ ಅಧ್ಯಕ್ಷ ಎಚ್. ಬಾಲಕೃಷ್ಣ ನಾಯಕ್, ಎಚ್.ವಾದಿರಾಜ ಶೆಟ್ಟಿ, ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್, ಗ್ರಾಮ ಲೆಕ್ಕಾಧಿಕಾರಿ ಗಣೇಶ್ ಕುಲಾಲ್ ಸಹಿತ ವರ್ತಕರ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಡಿತರ ಸಾಮಗ್ರಿ ವಿತರಣೆಗೆ ಸೂಚನೆ: ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಬೇಳಂಜೆ ಶಾಖೆಯಲ್ಲಿ ಜನರನ್ನು ಕಾಯಿಸದೇ ಸಮರ್ಪಕವಾಗಿ ಪಡಿತರ ಸಾಮಗ್ರಿಯನ್ನು ವಿತರಿಸುವಂತೆ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಸಹಕಾರಿ ಸಂಘದ ಸಿಬ್ಬಂದಿಗಳಿಗೆ ಹೆಬ್ರಿ ತಹಶೀಲ್ಧಾರ್ ಕೆ.ಮಹೇಶ್ಚಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುನಿಯಾಲು: ಮುನಿಯಾಲಿನ ಸಿಂಡ್ ಕೆನರಾ ಬ್ಯಾಂಕ್ ಎಟಿಎಂ ಕಳೆದ 6 ದಿನಗಳಿಂದ ಹಾಳಾಗಿದ್ದು, ಲಾಕ್ ಡೌನ್ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ತೀವ್ರ ಸಮಸ್ಯೆಯಾಗಿದೆ. ಹಣಕ್ಕಾಗಿ ದೂರದ ಹೆಬ್ರಿ ಕಾರ್ಕಳಕ್ಕೆ ತೆರಳಬೇಕಾಗಿದ್ದು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಹೆಬ್ರಿ ತಹಶೀಲ್ಧಾರ್ ಕೆ.ಮಹೇಶ್ಚಂದ್ರ ಮಂಗಳವಾರ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಪರಿಶೀಲನೆ ನಡೆಸಿ ತುರ್ತು ಎಟಿಎಂ ಸೇವೆಯನ್ನು ಜನತೆಗೆ ಒದಗಿಸುವಂತೆ ಸೂಚಿಸಿದ್ದಾರೆ.

ದಿನಸಿ ಸಾಮಗ್ರಿ ವಿತರಣೆ: ಶಿವಪುರ ಎಳಗೋಳಿ ಪರಿಸರದ ಮನೆಮಂದಿ ಮತ್ತು ಕೂಲಿ ಕಾರ್ಮಿಕರಿಗೆ ಗುಜರಾತ್ ಉದ್ಯಮಿ ಎಳಗೋಳಿ ಉದಯ ಸಿ.ಶೆಟ್ಟಿ ಸುಮಾರು 50 ಸಾವಿರ ರೂ. ವೌಲ್ಯದ ಅಕ್ಕಿ ಬೇಳೆ ಸಹಿತ ದಿನಸಿ ಸಾಮಾಗ್ರಿಗಳನ್ನು 50ಕ್ಕೂ ಅಧಿಕ ಮೆಗಳಿಗೆ ಮಂಗಳವಾರ ವಿತರಿಸಿದರು.

ಶಿವಪುರ ಎಳಗೋಳಿ ಪರಿಸರದ ಮನೆಮಂದಿ ಮತ್ತು ಕೂಲಿ ಕಾರ್ಮಿಕರಿಗೆ ಗುಜರಾತ್ ಉದ್ಯಮಿ ಎಳಗೋಳಿ ಉದಯ ಸಿ.ಶೆಟ್ಟಿ ಸುಮಾರು 50 ಸಾವಿರ ರೂ. ವೌಲ್ಯದ ಅಕ್ಕಿ ಬೇಳೆ ಸಹಿತ ದಿನಸಿ ಸಾಮಾಗ್ರಿಗಳನ್ನು 50ಕ್ಕೂ ಅಧಿಕ ಮನೆಗಳಿಗೆ ಮಂಗಳವಾರ ವಿತರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News