ಹಸಿವಿನಿಂದ ಕಾರ್ಮಿಕ ಮಹಿಳೆ ಸಾವು: ಪರಿಹಾರಕ್ಕೆ ಆಗ್ರಹ

Update: 2020-04-07 16:37 GMT

ಉಡುಪಿ, ಎ.7: ಸಿಂಧನೂರಿನ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ನೂರಾರು ಕಿ.ಮೀ ನಡೆದು ಹಸಿವಿನಿಂದ ಸಾವನಪ್ಪಲು ಕೇಂದ್ರ ಮತ್ತು ರಾಜ್ಯ ಸರಕಾರದ ಬೇಜವಾಬ್ದಾರಿತನಗಳೇ ಕಾರಣವೆಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಳ ಸಮನ್ವಯ ಸಮಿತಿ ಆರೋಪಿಸಿದೆ.

ಸರಕಾರ ಕೂಡಲೇ ರಾಯಚೂರು ಜಿಲ್ಲಾಧಿಕಾರಿಯನ್ನು ಆ ನತದೃಷ್ಟ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನವನ್ನು ಹೇಳಲು ಕಳಿಸಬೇಕು ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ದೊರಕುವ 5 ಲಕ್ಷದ ಪರಿಹಾರದ ಜೊತೆಗೆ ರಾಜ್ಯ ಸರಕಾರವೂ 10 ಲಕ್ಷ ಪರಿಹಾರ ಘೋಷಿಸಿ ಒಟ್ಟು 15 ಲಕ್ಷ ಪರಿಹಾರವನ್ನು ಗಂಗಮ್ಮಳ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಸಮಿತಿಯ ಸಂಚಾಲಕರಾದ ಸುರೇಶ್ ಕಲ್ಲಾಗರ್ ಹಾಗೂ ಶೇಖರ್ ಬಂಗೇರ ರಾಜ್ಯ ಸರಕಾರವನ್ನು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News