ನೋಮೊನಿಯಾದಿಂದ ಮಗು ಮೃತ್ಯು

Update: 2020-04-07 16:40 GMT

ಮಲ್ಪೆ, ಎ.7: ನೋಮೊನಿಯಾ ಕಾಯಿಲೆಯಿಂದ ಎರಡು ತಿಂಗಳ ಮಗು ಮೃತಪಟ್ಟ ಘಟನೆ ಮಲ್ಪೆಯಲ್ಲಿ ಎ.6ರಂದು ಮದ್ಯರಾತ್ರಿ ವೇಳೆ ನಡೆದಿದೆ.

ಮಲ್ಪೆಯ ಸುಮಯ್ಯ ಭಾನು ಎಂಬವರ ಎರಡು ತಿಂಗಳ ಗಂಡು ಮಗು ಸವುದ್ ಮೃತ ದುರ್ದೈವಿ. ಕಳೆದ ಒಂದು ತಿಂಗಳಿಂದ ನ್ಯೂಮೋನಿಯಾ ಕಾಯಿಲೆ ಬಳಲುತ್ತಿದ್ದ ಮಗುವನ್ನು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ರಾತ್ರಿ ಮಗುವಿಗೆ ನೋಮೊನಿಯಾ ಕಾಯಿಲೆ ತೀವ್ರಗೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಬರುವ ದಾರಿ ಮಧ್ಯೆ ಮಗು ಮೃತಪಟ್ಟಿತ್ತೆನ್ನಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News