ಉಡುಪಿ: ಬೆಳ್ಳಿ ಆಭರಣ ಮಳಿಗೆಗೆ ಬೆಂಕಿ
Update: 2020-04-07 22:33 IST
ಉಡುಪಿ: ರಥಬೀದಿ ಇಲ್ಲಿಯ ಶ್ಯಾಮ್ ಆ್ಯಂಡ್ ಬ್ರದರ್ಸ್ ಬೆಳ್ಳಿ ಆಭರಣಗಳ ಮಳಿಗೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸಂಜೆ ಸುರಿದ ಮಳೆಯ ಸಮಯದಲ್ಲಿ ಸಿಡಿಲು ಬಡಿದ ಪರಿಣಾಮ, ವಿದ್ಯುತ್ ಸಾರ್ಟ್ ಸರ್ಕ್ಯೂಟ್ ಆಗಿರಬಹುದೆಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದೆ.