ಕೋಮು ಪ್ರಚೋದಕ ಪೋಸ್ಟ್‌ : ಬಂಟ್ವಾಳದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು

Update: 2020-04-07 17:10 GMT

ಬಂಟ್ವಾಳ, ಎ.7: ಕೊರೋನ ವೈರಸ್ ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿರುವ ಆರೋಪದಲ್ಲಿ ತಾಲೂಕಿನ ಮೂವರ ವಿರುದ್ಧ ಸೋಮವಾರ ನೀಡಿದ ದೂರನ್ನು ಸ್ವೀಕರಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಂದಾವರ ಮಸೀದಿ ಬಳಿ ನಿವಾಸಿ ಸಂತೋಷ್ ಗೌಡ ಎಂಬಾತನ ವಿರುದ್ಧ ಎಸ್.ಡಿ.ಪಿ.ಐ. ಬಂಟ್ವಾಳ ಪುರಸಭಾ ಸಮಿತಿ ಸದಸ್ಯ ಅನ್ವರ್ ಆಲಡ್ಕ, ನಂದಾವರ ಕೊಪ್ಪಳ ನಿವಾಸಿ ಸಂತೋಷ್ ಕುಮಾರ್ ಎಂಬಾತನ ವಿರುದ್ಧ ಎಸ್.ಡಿಪಿಐ ನಂದಾವರ ಬ್ರಾಂಚ್ ಸದಸ್ಯ ಫಾರೂಕ್ ನಂದಾವರ, ತಾಲೂಕಿನ ಪಲ್ಲಮಜಲು ನಿವಾಸಿ ಸುನಿಲ್ ಪೂಜಾರಿ ಎಂಬಾತನ ವಿರುದ್ಧ ಪಿಎಫ್.ಐ ಬಿ.ಸಿ.ರೋಡ್ ಕಾರ್ಯದರ್ಶಿ ಅಬ್ದುಲ್ ರಹೀಂ ಪರ್ಲ್ಯ ಎಂಬವರು ಪ್ರತ್ಯೇಕ ದೂರು ನೀಡಿದ್ದರು. ಆದರೆ ಸೋಮವಾರ ರಾತ್ರಿ ವರೆಗೆ ಪ್ರಕರಣ ದಾಖಲಾಗಿರಲಿಲ್ಲ. 

ಈ ಮೂವರು ಕೊರೋನ ವೈರಸ್ ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರು, ಇಸ್ಲಾಂ ಧರ್ಮ, ಮಸೀದಿ ಹಾಗೂ ಮುಸ್ಲಿಮ್ ಧರ್ಮ ಗುರುಗಳನ್ನು ಅವಹೇಳನ ಮಾಡಿದ್ದಾರೆ. ಇದು ಸಮಾಜದಲ್ಲಿ ಶಾಂತಿಯನ್ನು ಕದಡಿ ಕೋಮು ಗಲಭೆ ನಡೆಸುವ ಪ್ರಯತ್ನವಾಗಿದ್ದು ಹಾಗಾಗಿ ಅವರನ್ನು ಬಂಧಿಸಿ ಕಾನೂನು ಕ್ರಮ ಜರಗಿಸುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News