​ಮನೆಯಲ್ಲೇ ‘ಶಬೇ ಬರಾಅತ್’ ಆಚರಿಸಲು ದ.ಕ. ಜಿಲ್ಲಾಧಿಕಾರಿ ಮನವಿ

Update: 2020-04-07 17:20 GMT

ಮಂಗಳೂರು, ಎ.7: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ (ಎ.8) ನಡೆಯುವ ‘ಶಬೇ ಬರಾಅತ್’ ಅನ್ನು ಮನೆಯಲ್ಲೇ ಆಚರಿಸಿರಿ. ಯಾವ ಕಾರಣಕ್ಕೂ ಸಾಮೂಹಿಕವಾಗಿ ಮಸೀದಿಗಳಲ್ಲಿ ಆಚರಿಸಬಾರದು ಎಂದು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮನವಿ ಮಾಡಿದ್ದಾರೆ.

ಜಗತ್ತಿನಾದ್ಯಂತ ಕೊರೋನ ಸೋಂಕು ಹರಡಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸೂಚನೆಯಂತೆ ಜಿಲ್ಲಾಡಳಿತವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ಆ ಪೈಕಿ ಧಾರ್ಮಿಕ ಕಾರ್ಯಕ್ರಮಗಳಿಗೂ ನಿರ್ಬಂಧ ವಿಧಿಸಲಾಗಿದೆ. ಅದಕ್ಕೆ ಎಲ್ಲಾ ಧರ್ಮದ ವಿದ್ವಾಂಸರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರೂ ಸಹಕರಿಸಿದ್ದಾರೆ. ಈಗಾಗಲೆ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಮಾಡದಿರುವ ಮೂಲಕ ಸಂಪೂರ್ಣ ಸಹಕರಿಸಿರುವ ಮುಸ್ಲಿಮರು ಖಾಝಿಗಳ ಕರೆಯಂತೆ ಎ.8ರ ‘ಶಬೇ ಬರಾಅತ್’ನ್ನು ಕೂಡ ಮನೆಯಲ್ಲೇ ಆಚರಿಸುವ ಮೂಲಕ ಕೊರೋನ ವೈರಸ್ ತಡೆಗಟ್ಟಲು ಮತ್ತು ಲಾಕ್‌ಡೌನ್ ಯಶಸ್ಸಿಗೆ ಸಹಕರಿಸಬೇಕು ಎಂದು ಡಿಸಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News