ಬಿಐಟಿ, ಬೀಡ್ಸ್ ವತಿಯಿಂದ ಹ್ಯಾಂಡ್ ಸ್ಯಾನಿಟೈಸರ್ ತಯಾರಿ

Update: 2020-04-07 17:24 GMT

ವಿಟ್ಲ : ದೇಶದಾದ್ಯಂತ ಕೊರೋನ ಭೀತಿ ಎದುರಾಗಿದ್ದು, ರೋಗ ಹರಡದಂತೆ ಇನೋಳಿಯ ಬಿಐಟಿಯ ರಸಾಯನ ಶಾಸ್ತ್ರ ವಿಭಾಗವು ಸ್ಯಾನಿಟೈಸರ್ ತಯಾರಿಸಿ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ವಿತರಿಸಿದರು.

ಕೋವಿಡ್-19 ಎಂಬ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಆವರಿಸಿ ಹಲವರನ್ನು ಬಲಿ ಪಡೆದು ಇಡೀ ಮನುಕುಲವನ್ನೇ ಆತಂಕಕ್ಕೀಡು ಮಾಡಿದೆ. ಈ ಸಂದರ್ಭದಲ್ಲಿ ವಿಜ್ಞಾನಿಗಳು ಹೇಳುವಂತೆ ರೋಗ ಹರಡುವಂತ ಮುಖ್ಯ ಅಂಗ ಮನುಷ್ಯನ ಕೈಗಳು. ಆದ್ದರಿಂದ ಕೈಗಳನ್ನು ಶುಚಿಯಾಗಿಡಲು ಹ್ಯಾಂಡ್ ಸ್ಯಾನಿಟೈಸರ್ ಪರಿಣಾಮಕಾರಿ. ಮಾರುಕಟ್ಟೆಯಲ್ಲಿ ಇದರ ಅಭಾವವನ್ನು ಅರಿತ ಬಿಐಟಿಯ ರಸಾಯನ ಶಾಸ್ತ್ರ ವಿಭಾಗವು ತನ್ನ ಪ್ರಯೋಗಾಲಯದಲ್ಲಿ ಡಬ್ಲ್ಯುಎಚ್‍ಓ  ಸೂಚಿಸಿದ ಮಾದರಿಯಲ್ಲಿ ಉತ್ತಮ ಪರಿಣಾಮಕಾರಿ ಸ್ಯಾನಿಟೈಸರ್‍ಗಳನ್ನು ತಯಾರಿಸಿ ಕಾಲೇಜಿನ ಅಧ್ಯಾಪಕ, ಸಿಬ್ಬಂದಿ ವರ್ಗದವರಿಗೆ, ವಸತಿ ಸಮುಚ್ಚಯದಲ್ಲಿರುವ ಕೆಲವು ವಿದ್ಯಾರ್ಥಿಗಳಿಗೆ ಹಾಗೂ ಕಾಲೇಜಿನ ಹತ್ತಿರದ ಊರಿನ ಹಲವು ಜನರಿಗೆ ಹಂಚಲಾಯಿತು ಎಂದು ಬಿಐಟಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಸದ್ಯದ ಮಾರುಕಟ್ಟೆಯಲ್ಲಿ ಸಿಗುವ ಹಲವು ಸ್ಯಾನಿಟೈಸರ್‍ಗಿಂತಲು ಇದರ ಗುಣಮಟ್ಟ ಉತ್ತಮವಾಗಿದೆ. ಈ ಸ್ಯಾನಿಟೈಸರಿಗೆ ಬಿಐಟಿ ಸ್ಯಾನಿಟೈಸರ್ ಎಂಬ ಹೆಸರಿಡಲಾಗಿದೆ. ಈ ಸ್ಯಾನಿಟೈಸರ್ನಲ್ಲಿ ಪ್ರಮುಖವಾಗಿ ಐಸೊ ಪ್ರೊಪೈಲ್ ಅಲ್ಕಾಹಾಲ್, ಜಲಜನಕದ  ಪೆರೋಕ್ಸೈಡ್ ಹಾಗೂ ಸುಗಂಧಕ್ಕಾಗಿ ಸರಭೂತ ತೈಲವನ್ನು ಉಪಯೋಗಿಸಲಾಗಿದೆ ಎಂದು ತಿಳಿಸಿದ್ದಾರೆ.

ರಸಾಯನಿಕ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರೊ. ಮುಸ್ತಫಾ ಖಲೀಲ್ ವಿಟ್ಲ  ಹಾಗೂ ಪ್ರೊ. ಇಮ್ರಾನ್ ಯು ಅಹ್ಮದ್ ರವರ ಮಾರ್ಗದರ್ಶನದಲ್ಲಿ ತಯಾರಿ ಕಾರ್ಯ ನಡೆಯಿತು. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು ಸಂಪರ್ಕಿಸಿ. 9620157885 ಎಂದು ಮುಖ್ಯಸ್ಥರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News