ಇಟಲಿ: ಹೊಸದಾಗಿ 636 ಸಾವು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Update: 2020-04-07 17:39 GMT

ರೋಮ್ (ಇಟಲಿ), ಎ. 7: ಇಟಲಿಯಲ್ಲಿ 24 ಗಂಟೆಗಳ ಅವಧಿಯಲ್ಲಿ ಕೊರೋನ ವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿ 636 ಸಾವುಗಳು ಸಂಭವಿಸಿವೆ ಎಂದು ಸೋಮವಾರ ವರದಿ ಮಾಡಲಾಗಿದೆ. ಇದು ಹಿಂದಿನ ದಿನದ ಸಾವಿನ ಸಂಖ್ಯೆಯಾದ 525ಕ್ಕಿಂತ ನೂರಕ್ಕಿಂತಲೂ ಅಧಿಕವಾಗಿದೆ ಎಂದು ಸಿವಿಲ್ ಪ್ರೊಟೆಕ್ಷನ್ ಏಜನ್ಸಿ ತಿಳಿಸಿದೆ.

ಆದರೆ, ಹೊಸ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

ಇಟಲಿಯಲ್ಲಿ ಫೆಬ್ರವರಿ 21ರಂದು ಸಾಂಕ್ರಾಮಿಕ ಸ್ಫೋಟಗೊಂಡಂದಿನಿಂದ ಆ ದೇಶದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 16,523ಕ್ಕೆ ಏರಿದೆ. ಇದು ಜಗತ್ತಿನಲ್ಲೇ ಅಧಿಕವಾಗಿದೆ.

ಇದೇ 24 ಗಂಟೆಗಳ ಅವಧಿಯಲ್ಲಿ 3,599 ಮಂದಿ ಹೊಸದಾಗಿ ಸೋಂಕುಪೀಡಿತರಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 1,32,547ಕ್ಕೆ ಏರಿದೆ. ಇದು ಮಾರ್ಚ್ 17ರ ಬಳಿಕ ಒಂದು ದಿನದಲ್ಲಿ ದಾಖಲಾದ ಕನಿಷ್ಠ ಸಂಖ್ಯೆಯ ಸೋಂಕು ಪ್ರಕರಣಗಳಾಗಿವೆ. ಇದಕ್ಕೂ ಮೊದಲು, ದೈನಂದಿನ ಸೋಂಕು ಪ್ರಕರಣಗಳ ಸಂಖ್ಯೆಯು 4,050-6,557 ವ್ಯಾಪ್ತಿಯಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News