ಕೊರೋನ ವೈರಸ್: ಜಾಗತಿಕ ಮೃತರ ಸಂಖ್ಯೆ 76,500

Update: 2020-04-07 17:46 GMT

ಮ್ಯಾಡ್ರಿಡ್ (ಸ್ಪೇನ್), ಎ. 7: ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್‌ನಿಂದಾಗಿ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ ಮಂಗಳವಾರ 76,500ನ್ನು ದಾಟಿದೆ.

ಅದೇ ವೇಳೆ, ಮಾರಕ ರೋಗದ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 13,66,000ವನ್ನು ದಾಟಿದೆ. ಈ ಪೈಕಿ, ಸುಮಾರು 2,94,000 ಮಂದಿ ಗುಣ ಹೊಂದಿದ್ದಾರೆ.

ಸ್ಪೇನ್‌ನಲ್ಲಿ ಮತ್ತೆ 743 ಸಾವು

ಸ್ಪೇನ್‌ನಲ್ಲಿ ಐದು ದಿನಗಳಲ್ಲಿ ಮೊದಲ ಬಾರಿಗೆ ದೈನಂದಿನ ಕೊರೋನ ವೈರಸ್ ಸಾವಿನ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಅಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 743 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News