ಮಂಗಳೂರು: ರಾಯಲ್ ಸೀ ಫುಡ್ ಮಾಲಕ ಹಾಜಿ ಅಹ್ಮದ್ ಬಾವ ನಿಧನ

Update: 2020-04-08 13:54 GMT

ಮಂಗಳೂರು: ನಗರದ ಜೆಪ್ಪು ಮುಹಿಯುದ್ದೀನ್ ಜುಮಾ ಮಸೀದಿಯ ಗೌರವ ಅಧ್ಯಕ್ಷರಾಗಿದ್ದ ಹಾಜಿ ಕೆ. ಅಹ್ಮದ್ ಬಾವ ಅವರು ಅಲ್ಪಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. 

ರಾಯಲ್ ಸೀ ಫುಡ್ ಮಾಲಕರಾಗಿದ್ದ ಅವರು, ಧಕ್ಕೆಯಲ್ಲಿ ಸುಮಾರು 35 ವರ್ಷ ಸಿಗಡಿ ವ್ಯಾಪಾರ ಮಾಡಿದ್ದರು.

ಅವರು ಸುಮಾರು 30 ವರ್ಷಗಳ ಕಾಲ ಜೆಪ್ಪು ಮುಹಿಯುದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿಯಾಗಿ ನಂತರ ಅಧ್ಯಕ್ಷರಾಗಿಯೂ ತನ್ನ ಸೇವೆಯನ್ನು ಸಲ್ಲಿಸಿದ್ದಾರೆ. 

ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಐವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಅಹ್ಮದ್ ಬಾವ ಅವರ ನಿಧನಕ್ಕೆ ಸೀ ಫುಡ್ ಬಯೆರ್ ಅಸೋಸಿಯೇಶನ್ ಅಧ್ಯಕ್ಷ ಮತ್ತು ಸದ್ಯಸರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News