ಬೈಕಂಪಾಡಿ ಎಪಿಎಂಸಿ : ತರಕಾರಿ, ಹಣ್ಣು ಸಗಟು ವ್ಯಾಪಾರ ಆರಂಭ

Update: 2020-04-08 04:53 GMT

ಮಂಗಳೂರು : ಕೊರೋನ ಸೋಂಕು ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳ ಗೊಂದಲದ ಬಳಿಕ ಕೊನೆಗೂ ಹಣ್ಣು ಮತ್ತು ತರಕಾರಿ ಸಗಟು ವ್ಯಾಪಾರಸ್ಥರು ತಮ್ಮ ವ್ಯವಹಾರವನ್ನು ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದು, ಇಂದು ವ್ಯಾಪಾರ ಆರಂಭಗೊಂಡಿದೆ. 

ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರ ಮನವಿ ಮೇರೆಗೆ ಸದ್ಯದ ತುರ್ತು ಪರಿಸ್ಥಿತಿಯಲ್ಲಿ ಹಣ್ಣು ತರಕಾರಿ ಸಗಟು ವ್ಯಾಪಾರವನ್ನು ಎಪಿಎಂಸಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು ಎಂದು ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ತಿಳಿಸಿದ್ದಾರೆ.

ಎಪಿಎಂಸಿಯಲ್ಲಿಯೇ ತರಕಾರಿ- ಹಣ್ಣು ಖರೀದಿಗೆ ಸೂಚನೆ

ನಗರ ಪಾಲಿಕೆ ವ್ಯಾಪ್ತಿಯೊಳಗಿನ ಉದ್ದಿಮೆ ಪರವಾನಿಗೆ ಹೊಂದಿರುವ ಎಲ್ಲಾ ತರಕಾರಿ ಮತ್ತು ಹಣ್ಣು ಹಂಪಲು ಚಿಲ್ಲರೆ ವ್ಯಾಪಾರಸ್ಥರು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ನಲ್ಲಿ ತೆರೆದಿರುವ ಹಾಪ್‌ಕಾಮ್ಸ್‌ನಲ್ಲಿ ಅಥವಾ ಇತರ ಸಗಟು ವ್ಯಾಪಾರಿಗಳಿಂದ ಮಾತ್ರವೇ ತರಕಾರಿ ಮತ್ತು ಹಣ್ಣು ಹಂಪಲು ಖರೀದಿಸಬೇಕು ಎಂದು ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News