ಮನಪಾ: ತೆರಿಗೆ ರಿಯಾಯಿತಿ ಸೌಲಭ್ಯ ಅವಧಿ ವಿಸ್ತರಣೆ

Update: 2020-04-08 09:41 GMT

ಮಂಗಳೂರು, ಎ. 8: ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು (ಬಿಬಿಎಂಪಿ ಹೊರತುಪಡಿಸಿ) 2020-21ನೇ ಸಾಲಿಗೆ ಅನ್ವಯಿಸುವಂತೆ ಆಸ್ತಿತೆರಿಗೆ ಮೇಲಿನ ಶೇ.5ರ ರಿಯಾಯಿತಿ ಸೌಲಭ್ಯದ ಕಾಲಾವಧಿಯನ್ನು ಎ.1ರಿಂದ ಮೇ 31ರರೆಗೆ ವಿಸ್ತರಿಸಿ ಸರಕಾರ ಆದೇಶಿಸಿದೆ.

ಪ್ರತೀ ಸಾಲಿನಂತೆ ಪೌರಸಭೆಗಳ ಕಾಯ್ದೆಯನ್ವಯ ಆರ್ಥಿಕ ವರ್ಷದ ಆರಂಭದಲ್ಲಿಯೇ ಸಾರ್ವಜನಿಕರು ನಗರ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಭರಿಸಬೇಕಾಗಿದೆ. ಎ.30ರೊಳಗೆ ಆಸ್ತಿ ತೆರಿಗೆ ಸಂದಾಯ ಮಾಡುವ ನಾಗರಿಕರಿಗೆ ಶೇ.5ರ ರಿಯಾಯಿತಿಯ ಸೌಲಭ್ಯ ಲಭ್ಯವಿದೆ.

‘ಕೊರೊನಾ ಕಾರಣದಿಂದ ಆಸ್ತಿ ತೆರಿಗೆ ಮೇಲಿನ ಶೇ.5ರ ರಿಯಾಯಿತಿ ಸೌಲಭ್ಯವನ್ನು ಮೇ 31ರೊಳಗೆ ವಿಸ್ತರಿಸಿ ಸರಕಾರ ಆದೇಶಿಸಿದೆ. ಈಗ ಆಸ್ತಿ ತೆರಿಗೆ ಪಾವತಿಸುವವರು ಕೂಡ ಇದರ ಪ್ರಯೋಜನ ಪಡೆದುಕೊಳ್ಳಬಹುದು. ತೆರಿಗೆ ಪಾವತಿಗೆ ಈಗಲೂ ಪಾಲಿಕೆ, ಬ್ಯಾಂಕ್‌ನಲ್ಲಿ ಅವಕಾಶ ವಿದೆ’ ಎಂದು ಮಂಗಳೂರು ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News