ಮಂಗಳೂರು ಹಿದಾಯ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ
ಪುತ್ತೂರು: ಹಿದಾಯ ಫೌಂಡೇಶನ್ ಮಂಗಳೂರು ಸಂಸ್ಥೆಯ ವತಿಯಿಂದ ಉಪ್ಪಿನಂಗಡಿ, ಕೊಯಿಲ, ಆತೂರು ಆಸುಪಾಸಿನ 81 ಬಡ ಕುಟುಂಬಗಳಿಗೆ ಮತ್ತು ಎಂ. ಫ್ರೆಂಡ್ಸ್ ಮಂಗಳೂರು ಸಂಸ್ಥೆ ವತಿಯಿಂದ ಗಂಡಿಬಾಗಿಲು ಪರಿಸರದ 34 ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್‍ಗಳನ್ನು ವಿತರಿಸಲಾಯಿತು.
ಹಿದಾಯ ಫೌಂಡೇಶನ್ ವತಿಯಿಂದ ಉಪ್ಪಿನಂಗಡಿ ಸಮೀಪದ ಅಂಬೊಟ್ಟು, ಕಡವಿನಬಾಗಿಲು ಪರಿಸರದಲ್ಲಿ 25 ಕುಟುಂಬಗಳಿಗೆ, ಕೊಯಿಲದ ಜನತಾ ಕಾಲನಿ, ಆತೂರು ಪರಿಸರದ ಪೆರ್ಜಿ, ಬೀಜತ್ತಳಿ, ಗೋಳಿತ್ತಡಿ ಪರಿಸರದ 41 ಕುಟುಂಬಗಳಿಗೆ, ಆತೂರುಬೈಲ್, ಎಲ್ಯಂಗ ಪರಿಸರದ 15 ಕುಟುಂಬಗಳಿಗೆ ಹೀಗೆ ಒಟ್ಟು 81 ಕುಟುಂಬಗಳಿಗೆ ಆಹಾರ ಸಾಮಗ್ರಿಯ ಕಿಟ್ ವಿತರಿಸಲಾಯಿತು.
ಎಂ. ಫ್ರೆಂಡ್ಸ್ ವತಿಯಿಂದ ಗಂಡಿಬಾಗಿಲು ಪರಿಸರಕ್ಕೆ 34 ಕಿಟ್
ಎಂ. ಫ್ರೆಂಡ್ಸ್ ಮಂಗಳೂರು ವತಿಯಿಂದ ಗಂಡಿಬಾಗಿಲು, ಸನ್ಯಾಸಿಮೂಲೆ, ಕೆಮ್ಮಾರ ಪರಿಸರದ 34 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಆಹಾರ ಕಿಟ್‍ಗಳ ವಿತರಣೆ ಸಂದರ್ಭದಲ್ಲಿ ಆಯಾ ಪ್ರದೇಶದಲ್ಲಿ ಹಿದಾಯ ಫೌಂಡೇಶನ್ ಮಂಗಳೂರು ಇದರ ಸದಸ್ಯ, ಪತ್ರಕರ್ತ ಸಿದ್ದಿಕ್ ನೀರಾಜೆ, ಉಪ್ಪಿನಂಗಡಿಯಲ್ಲಿ ಅಶ್ರಫ್ ಬಸ್ತಿಕ್ಕಾರ್, ಆತೂರು, ಕೊಯಿಲ ಪರಿಸರಕ್ಕೆ ಸಂಬಂಧಿಸಿದಂತೆ ರಾಮಕುಂಜ ಗ್ರಾಮ ಪಂಚಾಯಿತಿ ಸದಸ್ಯ ಎಚ್. ಅಬ್ದುಲ್ ರಹಿಮಾನ್, ನೀರಾಜೆ ಮದ್ರಸ ಸಮಿತಿಯ ಇಸ್ಮಾಯಿಲ್ ಪಾಲೆತ್ತಡಿ, ಗಂಡಿಬಾಗಿಲು ಮಸೀದಿ ಕಾರ್ಯದರ್ಶಿ ಜಿ. ಮಹಮ್ಮದ್ ರಫೀಕ್, ಆತೂರುಬೈಲ್‍ನ ಎ.ಕೆ. ಬಶೀರ್ ಉಪಸ್ಥಿತರಿದ್ದರು.